ಆತ್ಮೀಯರೇ, 

ನಿಮ್ಮ ಬಗ್ಗೆ ನೀವು ತಿಳಿದು ಕೊಳ್ಳುವುದಕ್ಕಿಂತ ಮೊದಲು ಈ ಪ್ರಪಂಚದ ಸೃಷ್ಠಿಯ ಬಗ್ಗೆ ತಿಳಿದುಕೊಳ್ಳಬೇಕು. ನಮ್ಮ ಕಣ್ಣಿಗೆ ಕಾಣದ ಯಾವುದೋ ಬಲವಾದ ಶಕ್ತಿ ಸೃಷ್ಟಿಯಲ್ಲಿದೆ. ಇದು ಕಣ್ಣಿಗೆ ಕಾಣದಿದ್ದರೂ ಪ್ರತಿಯೊಬ್ಬರಿಗೂ ಅನುಭವವಾಗುತ್ತದೆ. ಆದರೆ ಈ ಶಕ್ತಿ 9 ಗ್ರಹಗಳ ಮೂಲಕ 27 ನಕ್ಷತ್ರಗಳ ಮೂಲಕ 12 ರಾಶಿಗಳ ಹಾಗೇ ಈ ಭೂಮಿಯ 5 ಪಂಚಭೂತಗಳ ಮೂಲಗಳ ಪ್ರತಿ ಮಾನವ ಜೀವರಾಶಿಯ ಮೇಲೆ ಒಂದಲ್ಲ ಒಂದು ವಿಧವಾದ ಆಯಾ ಸಂದರ್ಭಕ್ಕೆ ತಕ್ಕ ಹಾಗೆ ತನ್ನ ಪ್ರಭಾವದಿಂದ ಆಯಾ ಮನುಷ್ಯನ ಜನ್ಮ ದಿನಾಂಕ/ತಿಂಗಳು/ವರ್ಷದ ಮುಖಾಂತರ ಆತನ/ಅವಳ ಹಿಂದಿನ ಜನ್ಮದ ಪಾಪ ಪುಣ್ಯಾನುಸಾರವಾಗಿ ಕೆಲಸ ಮಾಡುತ್ತಲೇ ಇದ್ದು ಪ್ರತಿ ಮಾನವ ಜೀವರಾಶಿಯನ್ನು ತನ್ನ ನಿಯಂತ್ರಣದಲ್ಲಿಟ್ಟು ಕೊಂಡಿದೆ.

ಮಾನವ ಬಾಲ್ಯ / ಯೌವ್ವನ / ಮುಪ್ಪು ಎಲ್ಲವು ವಿಧಿಯ ನಿಯಂತ್ರಣದಲ್ಲಿರುತ್ತದೆ. ನಮ್ಮದು ಎನ್ನುವುದು ಈ ಪ್ರಪಂಚದಲ್ಲಿ ಯಾವುದು ಇಲ್ಲ. ನೀವು ಹೆಣ್ಣಾಗಲಿ/ಗಂಡಾಗಲಿ ನೀವು ಯಾವ ದಿನಾಂಕ/ತಿಂಗಳು/ವರ್ಷದಲ್ಲಿ ಹುಟ್ಟಿದ್ದೀರಿ ನಿಮ್ಮ ತಂದೆ-ತಾಯಿಗಳ ಪುಣ್ಯ ಪಾಪಗಳ ಪ್ರಭಾವೇನು? ಹಿಂದಿನ ಜನ್ಮದ ಪಾಪ ಪುಣ್ಯಗಳ ಪ್ರಭಾವವೇನು? ಇವೆಲ್ಲವು ಈ ಜನ್ಮದಲ್ಲಿ ಅನುಭವಿಸಬೇಕಾಗುತ್ತದೆ. ನೀವು ಹುಟ್ಟುವುದಕ್ಕಿಂತ ಹಿಂದೆ ನಿಮ್ಮ ತಂದೆ/ತಾಯಿಗಳು ಏನಾದರೂ ಪಾಪ ಕರ್ಮವೇನಾದರೂ ಮಾಡಿದ್ದರೆ ಆ ಪಾಪ ಕರ್ಮಗಳ ಫಲವನ್ನು ನೀವು ಹಂಚಿಕೊಂಡು ಹುಟ್ಟುತ್ತೀರಿ. ನೀವು ಇದನ್ನು ಪರಿಹರಿಸಿ ಕೊಳ್ಳದಿದ್ದರೆ ನಿಮ್ಮ ಮಕ್ಕಳು ಇದನ್ನು ಹಂಚಿಕೊಂಡು ಹುಟ್ಟುತ್ತಾರೆ.

ನಂತರ ನೀವು ನಿಮ್ಮ ಜೀವನದ ಹಂತ ಹಂತಗಳಲ್ಲಿ ನಾನಾ ರೀತಿಯಾಗಿ ಅನುಭವಿಸುತ್ತೀರಿ. ನೀವು ಈ ಕರ್ಮಕಳೆದು ಕೊಳ್ಳದಿದ್ದರೆ ನಿಮಗೆ ಹುಟ್ಟುವ ಮಕ್ಕಳಿಗೆ ಇದು ಹಂಚಿಹೋಗಿ ಅವರು ಮುಂದೆ ಅನುಭವಿಸುತ್ತಾರೆ. ಒಳ್ಳೆಯದು ಮಾಡಿದ್ದರೆ ಒಳ್ಳೆಯದು ಕೆಟ್ಟದ್ದು ಮಾಡಿದ್ದರೆ ಕೆಟ್ಟದ್ದು ಇದು ಸೃಷ್ಟಿ ನಿಯಮ. ಆದ್ದರಿಂದ ಪ್ರತಿಯೊಬ್ಬರಿಗೂ ಹೇಳುವುದು ಇಷ್ಟೆ ಪ್ರತಿ ಮನುಷ್ಯನಿಗೆ ಕಷ್ಟ ಸುಖ ಪ್ರಾರಂಭವಾಗುವುದು. ಆದ್ದರಿಂದ ಪ್ರತಿಯೊಬ್ಬರಿಗೂ ಈ ಸತ್ಯವನ್ನು ತಿಳಿದುಕೊಳ್ಳಲು ಅವರವರ ಕರ್ಮ ಬಿಡುವುದಿಲ್ಲ ತಿಳಿದು ಕೊಳ್ಳುವಷ್ಟರಲ್ಲಿ ಎಲ್ಲ ಮುಗಿದು ಹೋಗಿರುತ್ತದೆ. ಇಂದು ಪ್ರತಿಯೊಬ್ಬರು ಕಷ್ಟ ಬಂದಾಗ ಮಾತ್ರ ಜೋತಿಷ್ಯ, ದೇವರು ಪರಿಹಾರ ಎಂದೆಲ್ಲ ಹೋಗುವುದು ಇಲ್ಲದಿದ್ದರೆ ಯಾವುದು ಜ್ಞಾಪಕಕ್ಕೆ ಬರುವುದಿಲ್ಲ. ಇದು ಬಹಳವಾದ ತಪ್ಪು.

ಈ ಕರ್ಮ ಭೂಮಿಯಲ್ಲಿ ಹುಟ್ಟುವ ಪ್ರತಿ ಜೀವರಾಶಿಗೂ ಒಂದಲ್ಲ ಒಂದು ಸಮಸ್ಸೆ / ಕಷ್ಟ / ಸುಖ ಇದ್ದೆ ಇರುತ್ತವೆ. ಇವು ಆಯಾನು ವ್ಯಕ್ತಿಗನುಗುಣವಾಗಿ ಬರುತ್ತಿರುತ್ತವೆ, ಹೋಗುತ್ತಿರುತ್ತವೆ. ಹೀಗಿದ್ದಲ್ಲಿ ನಾವು ಹುಟ್ಟಿದ ನಂತರ ಅಥವಾ ಬುದ್ಧಿ ಬಂದಮೇಲೆ ನಾನು ಯಾರು ಯಾವ ದಿನಾಂಕ / ತಿಂಗಳು / ವರ್ಷ / ನಕ್ಷತ್ರ / ರಾಶಿಯಲ್ಲಿ ಹುಟ್ಟಿದ್ದೇನೆ. ಇದರಲ್ಲಿ ಪುಣ್ಯದ ಭಾಗವೆಷ್ಟು ಪಾಪದ ಭಾಗವೆಷ್ಟು? ಪಾಪದಿಂದ ಕಷ್ಟಗಳು ಹೇಗೆ? ಯಾವಾಗ ಬರುತ್ತದೆ. ಪುಣ್ಯದ ಭಾಗವೆಷ್ಟು? ಯಾವಾಗ ಸುಖವಾಗಿರುತ್ತೇವೆ ಎಂದು ಮುಖ್ಯವಾಗಿ ತಿಳಿದುಕೊಳ್ಳಬೇಕು.

ಈ ಕರ್ಮಭೂಮಿಯ ಮೇಲೆ ಹುಟ್ಟುವ ಹೆಣ್ಣು/ಗಂಡಿನ ಮೇಲೆ ಮುಖ್ಯವಾಗಿ 9 ಗ್ರಹಗಳ ಪ್ರಭಾವ ಇರುತ್ತದೆ. ಇದನ್ನು ನೀವು ಕಣ್ಣಾರೆ ನೋಡಬಹುದು. ನಂತರದು 27 ನಕ್ಷತ್ರಗಳಿದ್ದು ಇದರ ನಂತರ 12 ರಾಶಿಗಳ ಮೂಲಕ 9 ಗ್ರಹಗಳು ಚಲಿಸುತ್ತಿರುವುದರಿಂದ ನೀವು ಹುಟ್ಟಿದ ದಿನಾಂಕ ತಿಂಗಳು / ವರ್ಷಕ್ಕೆ ಯಾವ ಗ್ರಹ ನಿಮಗೆ ಉಚ್ಛಸ್ಥಾನದಲ್ಲಿದೆ ಅಥವಾ ನೀಚ ಸ್ಥಾನದಲ್ಲಿದೆ. ಮೊದಲು ತಿಳಿದುಕೊಳ್ಳಬೇಕು. ನಂತರ 27 ನಕ್ಷತ್ರಗಳಲ್ಲಿ ನಿಮ್ಮದು ಯಾವುದು ಇವುಗಳಲ್ಲಿ ಕೆಟ್ಟ ಪ್ರಭಾವ ಒಳ್ಳೆಯ ಪ್ರಭಾವ ಎಂದಿರುತ್ತದೆ ಯಾವುದು ಎಂದು ತಿಳಿದುಕೊಳ್ಳಬೇಕು. ಇದರ ಜೊತೆಗೆ ಇನ್ನೊಂದು ಮುಖ್ಯವಾದ ವಿಷಯ ಎಂದರೆ 5 ಪಂಚಭೂತಗಳು, ನೀವು ವಾಸ ಮಾಡುವ ಸ್ಥಳ, ಊರು, ದೇಶ, ವಿದೇಶ ಅಲ್ಲಿನ ವಾಸ್ತು ಪರಿಸರವನ್ನು ನೋಡಿಕೊಳ್ಳಬೇಕು. ಜನ್ಮ ಜಾತಕಕ್ಕೆ ಅನುಗುಣವಾಗಿ ಏನಾದರೂ ದೋಷಗಳಿವೆಯೋ ಮುಖ್ಯವಾಗಿ ತಿಳಿದುಕೊಳ್ಳಬೇಕು, ಇದರಲ್ಲಿ ಜನ್ಮ ಶನಿಶಾಪ / ನಾಗದೋಷ / ಪಿತೃಶಾಪ / ಮಾತೃಶಾಪ/ಸ್ತ್ರೀಶಾಪ /ಗುರುಶಾಪ /ಬ್ರಾಹ್ಮಣ ಶಾಪ / ಋತುಮತಿ ಶಾಪ / ವೃಕ್ಷಶಾಪ / ಪ್ರಾಣಿಶಾಪ / ಹಿಂದಿನ ಜನ್ಮದ ಪಾಪ/ ನಕ್ಷತ್ರಶಾಪ/ ಪಿಶಾಚಿಶಾಪ / ಹೀಗೆ ಅನೇಕ ಶಾಪಗಳಿಗೆ ಗುರಿಯಾಗಿದ್ದೀರಾ ತಿಳಿದು ಕೊಳ್ಳಬೇಕು. ಇದಕ್ಕೆ ಪರಿಹಾರ ಮಾಡಿಕೊಳ್ಳಬೇಕು. ಇದು ಮೊದಲ ಭಾಗ ನಂತರ ನಿಮ್ಮ ವಾಸಸ್ಥಳದಲ್ಲಿ  ಏನಾದರೂ ವಾಸ್ತುವಿಗೆ ಸಂಬಂಧ ಪಟ್ಟ ಸಮಸ್ಯೆ ಇರುವುದೇ ತಿಳಿದುಕೊಂಡು ಪರಿಹಾರ ಮಾಡಿಕೊಳ್ಳಬೇಕು. ಪಂಚಭೂತಗಳಿಗೆ ಅನುಗುಣವಾಗಿ ಪರಿಸರವನ್ನು ಸೃಷ್ಠಿಸಿಕೊಂಡು ನಂತರ ಮುಖ್ಯವಾಗಿ ದಶಾಭುಕ್ತಿಗಳನ್ನು ನೋಡಿಕೊಳ್ಳಬೇಕು, ನೋಡಿ ಈ ದಶೆಗಳು ಎನ್ನುವ ಪ್ರಭಾವ ಇದೆಯಲ್ಲ ಇದು ಎಷ್ಟು ಪರಿಣಾಮಕಾರಿ ಎಂದರೆ ಆಯಾ ಮನುಷ್ಯನ ಪಾಪಕರ್ಮ ಪುಣ್ಯ ಕಮರ್ಾನುಸಾರ ಅತ್ಯಂತ ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗುವುದು ಅಥವಾ ಅತ್ಯಂತ ನೀಚ ಮಟ್ಟಕ್ಕೂ ತೆಗೆದುಕೊಂಡು ಹೋಗುವುದು. ಯಾರು ಈ ಪ್ರಪಂಚದಲ್ಲಿ ಸ್ಥಿರವಾಗಿರುವುದಕ್ಕೆ ಸಾಧ್ಯವಿಲ್ಲ. ಒಂದು ಸರಿ ಸುಖ - ಸಂತೋಷವಿದ್ದಾ ಹಾಗೆ ಮತ್ತೊಂದು ಸರಿ ಇರುವುದಿಲ್ಲ. ಹಣ, ಅಧಿಕಾರ, ಅಂತಸ್ತು, ಯಾವುದು ಸ್ಥಿರವಿರುವುದಿಲ್ಲ. 9 ಗ್ರಹಗಳ ದೆಶೆಗಳು ಮನುಷ್ಯ ಹುಟ್ಟಿದಾಗಿನಿಂದ ಕೊನೆ ಸಾಯುವವರೆಗು ಒಂದಲ್ಲ ಒಂದು ರೀತಿ ಕಷ್ಟ-ಸುಖಗಳನ್ನು ತಂದು ಕೊಡುತ್ತಿರುತ್ತವೆ. ಯಾರಿಗೆ ಯಾವಾಗ ಸುಖ ಯಾರಿಗೆ ಯಾವಾಗ ದುಃಖ ಕಷ್ಟ ಎನ್ನುವುದನ್ನು ಈ ದೆಶೆಗಳು ಅತ್ಯಂತ ನಿಖರವಾಗಿ ತಿಳಿಸುತ್ತ ಹೋಗುತ್ತದೆ. ನಾವು ಯಾವಾಗ ಏನು ಮಾಡಬೇಕು? ಯಾವ ಮಾರ್ಗದಲ್ಲಿ ಹೋಗಬೇಕು? ಎನ್ನುವ ವಿಚಾರಗಳನ್ನು ಪ್ರತಿ ವರ್ಷತಿಳಿಸುತ್ತದೆ. ಈ ವಿಚಾರಗಳ ಮುಖಾಂತರ ಕೆಟ್ಟ ವರ್ಷಗಳಲ್ಲಿ ಪರಿಹಾರ ಮಾಡಿಕೊಳ್ಳುತ್ತಾ ಒಳ್ಳೆ ವರ್ಷಗಳಲ್ಲಿ ಒಳ್ಳೆಯ ಕೆಲಸ ಮಾಡುತ್ತ ಜೊತೆಗೆ ನಮ್ಮ ನಮ್ಮ ಜನ್ಮ ದಿನಾಂಕಕ್ಕೆ ಅನುಗುಣವಾಗಿ ಸಂಬಂಧಪಟ್ಟ ದೈವಗಳನ್ನು ಪೂಜೆ ಮಾಡುತ್ತ ಸನ್ಮಾರ್ಗದಲ್ಲಿ ನಡೆಯುತ್ತ ಜೀವನ ನಡೆಸಬೇಕು.

Menu

Go to top