ಪ್ರತಿ ವ್ಯಕ್ತಿ ಹುಟ್ಟಿದಾಗಿನಿಂದ ಆತನ ಕರ್ಮನುಸಾರ ಆಯಾಯ ತಿಂಗಳು / ವರ್ಷಗಳಲ್ಲಿ ಏನಾದರೊಂದು ಆರೋಗ್ಯ ಸಮಸ್ಯೆಗೆ ಒಳಗಾಗುತ್ತಾನೆ. ಇದು ಕೂಡ ಗ್ರಹಗತಿಗಳ ಪ್ರಭಾವವೇ.

ಎಲ್ಲಾ ಭಾಗ್ಯಗಳಿಗಿಂತಲೂ ಆರೋಗ್ಯ ಭಾಗ್ಯ ಚೆನ್ನಾಗಿರಬೇಕು. ಆರೋಗ್ಯವಿಲ್ಲದೇ ಯಾವು ಭಾಗ್ಯವಿದ್ದರೇ ಏನು ಪ್ರಯೋಜನ? ಎಲ್ಲಾ ಭಾಗ್ಯಗಳನ್ನು ಅನುಭವಿಸುವುದಕ್ಕೆ ದೇಹ ಮತ್ತು ಮನಸ್ಸು ಉತ್ತಮ ಸ್ಥಿತಿಯಲ್ಲಿರಬೇಕು. ಪ್ರತಿ ಮಾನವ ಅದೃಷ್ಟವಿದ್ದರೆ, ಕಷ್ಟಪಟ್ಟರೆ ಎಲ್ಲಾ ರೀತಿಯ ಭೋಗಭಾಗ್ಯಗಳನ್ನು ಪಡೆಯಬಹುದು. ಆದರೆ ಈ ಎಲ್ಲಾ ಜಂಜಾಟಗಳಲ್ಲಿ ತನ್ನ ಆರೋಗ್ಯವನ್ನು ಮರೆತು ಬಿಡುತ್ತಾನೆ ಅಥವಾ ತನ್ನ ಜಾತಕ ಕರ್ಮಗಳನ್ನು ಮರೆತುಬಿಡುತ್ತಾನೆ.

ಹುಟ್ಟಿದಾಗಲೇ ನಿಮ್ಮ ಆರೋಗ್ಯ ಕಾಪಾಡುವ ಗ್ರಹಗಳು ಸಾಯುವವರೆಗೂ ನಿಮ್ಮ ಪರವಾಗಿದ್ದರೇ ಜೀವಿತ ಪೂತರ್ಿ ನೀವೆ ಹೇಗೆ ಇದ್ದರೂ ನಿಮಗೆ ಯಾವ ರೋಗಗಳು ಬಾಧಿಸುವುದಿಲ್ಲ.

ಈ ಜನ್ಮದಲ್ಲಿ ಪಡೆಯುವ ಯಾವುದೇ ಫಲಗಳು ಹಿಂದಿನ ಜನ್ಮದಿಂದ ಬಂದಿರುವಂತಹವು ಹಿಂದಿನ ಜನ್ಮದಲ್ಲಿ ಮಾಡಿದ ಪಾಪಗಳ ಕರ್ಮಗಳಿಂದ ಈ ಜನ್ಮದಲ್ಲಿ ಎಷ್ಟೇ ಪುಣ್ಯ ಕೆಲಸ ಮಾಡಿದರುಊ ಸಹ ಅನೇಕ ವಿಧದ ಕಷ್ಟಗಳಿಂದ ತೊಂದರೆ ಅನುಭವಿಸಬೇಕು. ಈ ಪಾಪಗಳು ತೀರಿದ ಬಳಿಕ ಈ ಜನ್ಮದ ಪುಣ್ಯದಂತೆ ಸುಖದಿಂದ ಇರುತ್ತಾರೆ. ಅದೇ ಹಿಂದಿನ ಜನ್ಮದಲ್ಲಿ ಮಾಡಿದ ಪುಣ್ಯದಿಂದ ಈ ಜನ್ಮದಲ್ಲಿ ಸುಖದಿಂದ ಇರುತ್ತಾರೆ. ಹಿಂದೆ ಪಾಪಕರ್ಮಗಳು ಈ ಜನ್ಮದಲ್ಲಿ ತೀರದಿದ್ದರೆ ಹಿಂದಿನ ಜನ್ಮದಲ್ಲಿ ಹುಟ್ಟಿ ಅನುಭವಿಸಿ ತೀರಿಸಲೇಬೇಕು. ಇದು ಕರ್ಮ ಸಿದ್ಧಾಂತ.

ಕೆಲವು ಸಾರಿ ಗೊತ್ತಿದ್ದು ಗೊತ್ತಿಲ್ಲದೆಯೋ ತಮ್ಮ ಸ್ವಯಂಕೃತ ಅಪರಾಧಗಳಿಂದ ಮಾನವ ಹಲವಾರು ರೋಗಗಳಿಗೆ ತುತ್ತಾಗುತ್ತಾನೆ. (ವಿಪರೀತ ಮಧ್ಯ ಸೇವನೆ, ಬೀಡ, ಜದರ್ಾ, ಗಾಂಜಾ, ಪಾನ್ ಪರಾಗ್, ಬೀಡಿ, ಸಿಗರೇಟ್ ಹೀಗೆ ನಾನಾ ದುರಭ್ಯಾಸಗಳಿಗೆ ಒಳಗಾಗುವುದು).

ಪ್ರತಿ ಗ್ರಹಗಳಿಂದ ಸುಮಾರು 1,200 ರೀತಿಯ ರೋಗಗಳು ಮನುಷ್ಯನಿಗೆ ಬರುತ್ತವೆ. ಈ ರೋಗಗಳು ಯಾವುದು ಎಂದು ತಿಳಿಯಬೇಕಾದರೆ ವ್ಯಕ್ತಿ ಹುಟ್ಟಿದ ಜನ್ಮ ದಿನದ / ಜಾತಕಗಳನ್ನು ನೋಡಬೇಕು. ಯಾವಾಗ ಯಾವ ಗ್ರಹದಿಂದ ರೋಗಗಳು ಬರುತ್ತವೆ ಎಂದು ಅತ್ಯಂತ ನಿಖರವಾಗಿ ತಿಳಿಯಬಹುದು. ಇದರಂತೆ ಆಯಾ ಕಾಲಕ್ಕೆ ತಕ್ಕಂತೆ ಗ್ರಹಗತಿಗಳಿಗೆ ಪರಿಹಾರ ಮಾಡಿಕೊಳ್ಳಬೇಕು.

ಇಂದು ಏನಾದರೂ ತೊಂದರೆ ಬಂದರೆ ಮೊದಲು ಹೋಗುವುದು ವೈದ್ಯರ ಬಳಿಕ ಇದು ಎಲ್ಲಾ ಸಂದರ್ಭಗಳಲ್ಲಿ ಉಪಯೋಗಕ್ಕೆ ಬರುವುದಿಲ್ಲ. ಎಷ್ಟೋ ಜನ ವೈದ್ಯರುಗಳು ತಾವು ಮಾಡುವ ಚಿಕಿತ್ಸೆ ಮಾಡಿ ಮುಂದಿನದು ದೇವರಿಗೆ ಬಿಟ್ಟಿದ್ದು ಎನ್ನುತ್ತಾರೆ. ತೀರ ತುತರ್ು ಸಂದರ್ಭಗಳನ್ನು ಹೊರತುಪಡಿಸಿ ನಿಮಗೆ ಆರೋಗ್ಯದ ಸಮಸ್ಯೆ ಕಂಡುಬಂದಲ್ಲಿ ಮೊದಲು ನೀವು ವೈದ್ಯರನ್ನು ನೋಡುವುದರ ಜೊತೆಗೆ ನಿಮ್ಮ ಜಾತಕವನ್ನು ತೆಗೆದುಕೊಂಡು ನೋಡಿಕೊಂಡು ಯಾವ ಗ್ರಹದಿಂದ ನಿಮಗೆ ಆರೋಗ್ಯ ಸಮಸ್ಯೆ ಉದ್ಭವವಾಗುತ್ತದೆ ಎಂಬುದನ್ನು ತಿಳಿದುಕೊಂಡು ಆ ಗ್ರಹಕ್ಕೆ ಮೊದಲು ನಿಖರವಾದ ಪರಿಹಾರವನ್ನು ಮಾಡಿ ಕೊಳ್ಳುವುದರಿಂದ ನಿಮಗೆ ಬಂದ ರೋಗ ಮಾಯವಾಗುತ್ತದೆ.

ಯವುದೇ ವ್ಯಕ್ತಿ ಸ್ತ್ರೀಯಾಗಲಿ / ಪುರುಷರಾಗಲಿ ನಿಮ್ಮ ದೇಹದ ವಾತ ಪಿತ್ತ ಕಫ ಸಮತೋಲನ ಸ್ಥಿತಿಯಲ್ಲಿರಬೇಕು. ಈ ಮೂರರಲ್ಲಿ ಯಾವುದೂ ವ್ಯತ್ಯಾಸವಾದರೂ ರೋಗ ಕಟ್ಟಿಟ್ಟ ಬುತ್ತಿ. ನಿಮಗೆ ಎಂತಹ ರೋಗ ಬಂದಿರಲಿ ಈ ಮೂರಕ್ಕೆ ಸಂಬಂಧ ಪಟ್ಟಿರುತ್ತದೆ.

ಈ ರೀತಿ ಬಂದಾಗ ಸ್ತೋತ್ರ-ಮಂತ್ರ, ದಾನ-ಧರ್ಮ ಕ್ಷೇತ್ರ ದರ್ಶನ ನದಿ ಸ್ನಾನ ಯಂತ್ರ-ಮಂತ್ರ-ತಂತ್ರ ಪ್ರಯೋಗಗಳಿಂದ ಪರಿಹಾರ ಮಾಡಿಕೊಳ್ಳಬೇಕು.

ದಿನನಿತ್ಯದ ಬದುಕಿನಲ್ಲಿ ಯಾವುದೇ ವ್ಯಕ್ತಿ ಹೇಗೆ ತನ್ನ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಬಾಲ್ಯ-ಯೌವ್ವನ- ಮಧ್ಯಮ-ಮುಪ್ಪು ಹೀಗೆ ಈ ನಾಲ್ಕು ಹಂತಗಳಲ್ಲಿ ಬಂದು ಹೋಗುವ ಗ್ರಹಗತಿಗಳ ಚಲನ-ವಲಯ ಎಷ್ಟರಮಟ್ಟಿಗೆ ನಿಜವಾಗಿದೆ ಎಂಬುದನ್ನು ಮುಂಚಿತವಾಗಿ ತಿಳಿದುಕೊಳ್ಳಬೇಕು.

ಹಿಂದಿನ ಜನ್ಮದ ನೀಚ ಕರ್ಮವಿಲ್ಲದಿದ್ದರೆ ಈ ಜನ್ಮದಲ್ಲಿ ರೋಗಗಳು ಬರುವುದಿಲ್ಲ. ಆದರೆ ಈ ಜನ್ಮದಲ್ಲಿ ಮಾಡುವ ಕರ್ಮಗಳಿಂದ ಬರಬಾರದು ವಾಸಿಯಾಗದ ಕಂಡು ಹಿಡಿಯಲಾಗದ ಬಾಧಕ-ಮಾರಕ ರೋಗಗಳು ಬರುತ್ತವೆ. ಬಂದು ಅನುಭವಿಸುವ ಬದಲು ದಿನನಿತ್ಯದ ಜೀವನದಲ್ಲಿ ದೈತ ಚಿಂತನ ಆಧ್ಯಾತ್ಮಿಕ ಜೀವನ ನೆಮ್ಮದಿಯ ಸಂತೋಷದ ಬದುಕು ನಡೆಸುವುದು ಉತ್ತಮ.

ಯಾವುದೇ ಭಾದಕ ರೋಗಗಳಿಗೆ ನಮ್ಮ ಜನ್ಮ ಕರ್ಮಗಳ ಜೊತೆಗೆ ನಾವು ವಾಸ ಮಾಡುವ ಮನೆ ಕಛೇರಿ ಫ್ಯಾಕ್ಟರಿಗಳ ವಾಸ್ತು ಕೂಡ ಕಾರಣವಾಗುತ್ತದೆ. ಇದನ್ನು ಮುಖ್ಯವಾಗಿ ನೋಡಿಕೊಳ್ಳಬೇಕು.

ವಾಸ್ತು ವಿರುದ್ಧವಾಗಿದ್ದರೆ ಕಂಡು-ಕೆಳರಿಯದ ರೋಗ-ರುಜಿನಗಳು ನಮ್ಮ ಮೇಲೆ ಅಥವಾ ಇಡೀ ಕುಟಂಬದ ಮೇಲೆ ದಾಳಿ ಮಾಡುತ್ತವೆ.

ಗ್ರಹಗತಿಗಳು ನೀಚವಾಗಿದ್ದು ವಾಸ್ತು ಕೂಡ ನೀಚವಾಗಿದ್ದರೆ ಆ ದೇವರು ಕೂಡ ನಮ್ಮನ್ನು ಕಾಪಾಡಲಾರ. ಇದನ್ನು ನಾವೇ ಸರಿಪಡಿಸಿಕೊಂಡು ಪ್ರಕೃತಿ ನಿಯಮದಂತೆ ಬದುಕಬೇಕು.

ಇಂದು ಸಮಾಜದಲ್ಲಿ ನಾವು ನೋಡುವ ಪ್ರಸಿದ್ಧ ವ್ಯಕ್ತಿಗಳು ಶ್ರೀಮಂತರು ನೋಡುವುದಕ್ಕೆ ಚೆನ್ನಾಗಿ ಕಾಣುತ್ತಾರೆ. ಆದರೆ ಇವರಿಗೆಲ್ಲಾ ನಾನಾ ರೋಗಗಳು ದೇಹದ ತುಂಬೆಲ್ಲಾ ವ್ಯಾಪಿಸಿವೆ. ಬೇಗ ಹಣ ಮಾಡುವ ಶ್ರೀಮಂತರಾಗುವ ದುರಾಸೆಯಿಂದ ಮಾಡಬಾರದ  ಪಾಪಕರ್ಮಗಳನ್ನೆಲ್ಲಾ ಮಾಡಿ ನಾನಾ ರೋಗಗಳನ್ನು ಆಹ್ವಾನಿಸಿಕೊಳ್ಳುತ್ತಾರೆ. ಇದು ಭಯಂಕರವಾಗಿ ಹರಡಿರುವ ಸಕ್ಕರೆ ಖಾಯಿಲೆ, ಏಡ್ಸ್, ಕ್ಯಾನ್ಸರ್, ಕುಷ್ಠ ರೋಗಗಳೇ ಇದಕ್ಕೆ ಸಾಕ್ಷಿ,  ಇವೆಲ್ಲವೂ ವಂಶವಾಹಿನಿ ಖಾಯಿಲೆಗಳು.

ಆದ್ದರಿಂದ ಎಂತಹ ಪರಿಸ್ಥಿತಿ ಬಂದರೂ ಸ್ವರ್ಥಕ್ಕಾಗಿ ಪಾಪ-ಕರ್ಮಗಳನ್ನು ಮಾಡುವುದನ್ನು ಬಿಡಿ. ಸಾತ್ವಿಕ ಜೀವನ, ಆಧಾತ್ಮಿಕ ಮಾರ್ಗ, ದೈವ ಚಿಂತನೆ, ದಾನ-ಧರ್ಮ, ಪ್ರಕೃತಿ ಜೀವನ ಅವಲಂಬಿಸಿ ಕಾಲ ಕಾಲಕ್ಕೆ ಪರಿಶೀಲಿಸಿ ನವಗ್ರಹ ದೋಷ ಪರಿಹಾರಗಳನ್ನು ಮಾಡಿಕೊಂಡು ರೋಗ ಮುಕ್ತರಾಗಿ ಒಳ್ಳೆಯ ಜೀವನ ನಡೆಸಿ, ಮುಖ್ಯವಾಗಿ ಬಾಲ್ಯದಿಂದ ಕೊನೆಯವರೆಗೂ ಹೇಗೆ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು?

1. ಬಾಲ್ಯದಿಂದಲೇ ಸೂಕ್ತ ಗುರುವಿನಿಂದ ಯೋಗಾಭ್ಯಾಸವನ್ನು ಅಭ್ಯಾಸ ಮಾಡಿ ಅಥವಾ ಈಗಿನಿಂದಲೇ ಯೋಗಾಭ್ಯಾಸ ಕಲಿತುಕೊಳ್ಳಿ. ಯೋಗದಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ರೋಗ ನಿರೋಧಕ ಶಕ್ತಿ ಕಡಿಮೆಯಾದಾಗಲೇ ನಾನಾ ರೋಗಗಳು ದೇಹವನ್ನು ಆವರಿಸುತ್ತವೆ.

2. ಬಾಲ್ಯದಿಂದಲೇ ಅಥವಾ ಈಗಿನಿಂದಲೇ ಪ್ರಾಚೀನ ಪದ್ಧತಿಯಾದ ಆಯರ್ುವೇದ ಚಿಕಿತ್ಸೆಯನ್ನು ಹೆಚ್ಚಾಗಿ ಅವಲಂಬಿಸಿ ಆಯರ್ುವೇದಕ್ಕೆ 5000 ವರ್ಷಗಳ ಇತಿಹಾಸವಿದೆ. ಇಂಗ್ಲೀಷ್ ಮೆಡಿಸಿನ್ ಆ ಸಮಯಕ್ಕೆ ಸೂಕ್ತ ಎನಿಸಿದರೂ ಸೈಡ್ ಎಫೆಕ್ಟ್ ಪ್ರಭಾವವೇ ಹೆಚ್ಚು. ಒಂದು ಸರಿಯಾಗಿ ಇನ್ನೊಂದು ಪ್ರಾರಂಭವಾಗುತ್ತದೆ.

3. ಪ್ರತಿದಿನ 3 ರಿಂದ 4 ಲೀಟರ್ ನೀರನ್ನು ಸೇವಿಸಿ ಇದು ಒಂದು ಮುಖ್ಯವಾದದು.

4. ಬೆಳಗಿನ ಜಾವ ಯೋಗ ವ್ಯಾಯಾಮದ ನಂತರ ಮೊಳಕೆ ಕಾಳು, ಹಣ್ಣಿನ ರಸ, ತರಕಾರಿ ರಸ (ಜ್ಯೂಸ್) ಸೇವಿಸಿ. ಪ್ರತಿ ವಾರದ ಒಂದು ದಿನ ಎಣ್ಣೆ ಸ್ನಾನ ಮಾಡಿ.

5. ಮಧ್ಯಾಹ್ನ ಅನ್ನದ ಬದಲು ಹೆಚ್ಚು ಗೋಧಿ ಆಹಾರ, ರಾಗಿಯಿಂದ ಮಾಡಿದ ಆಹಾರ ಬಳಸಿ ಹಣ್ಣಿನ ಸಲಾಡ್, ತರಕಾರಿ ಸಲಾಡ್ ಬಳಸಿ.

6. ಸಂಜೆ 7 ಗಂಟೆಯೊಳಗಡೆ ಊಟ ಮಾಡಿ. ಊಟದಲ್ಲಿ ಗೋಧಿ ಆಹಾರ, ರಾಗಿಯ ಆಹಾರ, ಸೊಪ್ಪು ತರಕಾರಿ ಹಣ್ಣು ಹೆಚ್ಚಾಗಿ ಉಪಯೋಗಿಸಿ. ಮಲಗುವುದಕ್ಕೆ ಆಹಾರ ಸೇವನೆ ಮಾಡದೆ ಸಮಯವಿಲ್ಲದ ಸಮಯಕ್ಕೆ ಸಿಕ್ಕ ಸಿಕ್ಕ ಆಹಾರ ತೆಗೆದುಕೊಳ್ಳುತ್ತಾ ನಿದ್ರೆಯಿಲ್ಲದೆ ನಿಮ್ಮ ದೇಹದ ಜೀಣರ್ಾಂಗ ವ್ಯವಸ್ಥೆಯನ್ನು ನೀವೇ ಸ್ವತಃ ಹಾಳು ಮಾಡಿಕೊಂಡು ಸಕಲ ರೋಗಗಳನ್ನು ಆಹ್ವಾನಿಸಿಕೊಳ್ಳುತ್ತಿದ್ದೀರಿ.

7. ಆದಷ್ಟು ಮಾಂಸ ಆಹಾರವನ್ನು ವಜರ್ಿಸಿ ಒಂದು ಮುಗ್ದ ಪ್ರಾಣಿಯನ್ನು ಕೊಂದು ತಿನ್ನುವುದು ಮಹಾ ಪಾಪ. ಕರ್ಮಗಳು ಇನ್ನು ಹೆಚ್ಚಾಗುತ್ತದೆ. ಈ ಪ್ರಾಣಿಯ ಮಾಂಸದಲ್ಲಿರುವ ರೋಗಗಳು ಮಾಂಸ ತಿನ್ನುವುದರಿಂದ ನಿಮ್ಮ ದೇಹ ಸೇರುತ್ತವೆ. ಹಿಂದಿನ ಜನ್ಮದ ಪಾಪ-ಕರ್ಮಗಳ ಜೊತೆಗೆ ಈ ಜನ್ಮದ ಪಾಪ-ಕರ್ಮಗಳು ಸೇರಿ ನಿಮಗೆ ದುರದೃಷ್ಟ ತುರತ್ತವೆ. ಇದರ ಬಗ್ಗೆ ಎಚ್ಚರ ವಹಿಸಿ. ಪ್ರಕೃತಿ ನಿಯಮದಡಿ ಜೀವನ ನಡೆಸಿ. ಪ್ರತಿ ವರ್ಷ ಆರು ತಿಂಗಳಿಗೊಂದು ಸಾರಿ ನಿಮ್ಮ ದೇಹವನ್ನು ಪ್ರಕೃತಿ ಚಿಕಿತ್ಸೆಯಿಂದ ಶುದ್ಧಿ ಪಡಿಸಿಕೊಳ್ಳಿ. ಇದರಿಂದ ದೇಹದಲ್ಲಿರುವ ವಿಷಾಣು (ಟಾಕ್ಸಿಕ್ ಹೊರ ಹೋಗಿ ನವ ಚೈತನ್ಯದಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಎಷ್ಟೇ ಕಷ್ಟ ಮಾನಸಿಕ ದೈಹಿಕ ಒತ್ತಡವಿದ್ದು ಬಿಡುವುದಿದ್ದರೂ ಸಮಯ ಹೊಂದಾಣಿಕೆ ಮಾಡಿಕೊಂಡು ಮೇಲಿನ ನಿಯಮಗಳನ್ನು ಪಾಲಿಸಿದ್ದೇ ಅದರಲ್ಲಿ ಜೀವನದಲ್ಲಿ ಉತ್ತಮ ಆರೋಗ್ಯದಿಂದ ಜೀವನ ನಡೆಸುವಿರಿ.

ಆರೋಗ್ಯವೇ ಭಾಗ್ಯ...

ಆರೋಗ್ಯದಿಂದ ಅದೃಷ್ಟ. ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿ ನಿಮ್ಮ ಅದೃಷ್ಟ ನಿಮ್ಮ ಕೈಯಲ್ಲಿ.

Menu

Go to top