ಪ್ರತಿ ಮಾನವನ ಜೀವನದಲ್ಲಿ ಮದುವೆ ಎನ್ನುವುದು ಮಾತ್ರ ಮೊದಲ ತಿರುವು ಪ್ರಮುಖವಾದ ಘಟ್ಟ, ಸ್ತ್ರೀಯಾಗಲೀ ಪುರುಷರಾಗಲಿ ನಿಜವಾದ ಅಧ್ಯಾಯ ಪ್ರಾರಂಭವಾಗುವುದೇ, ಮದುವೆ ಎಂಬ ಜೀವನಕ್ಕೆ ಕಾಲಿಟ್ಟಾಗ ಆದರೆ ಮದುವೆ ಎಂಬ ಮೂರಕ್ಷರ ಕೆಲವರ ಬಾಳಿನಲ್ಲಿ ದುರಾದೃಷ್ಟ ತಂದರೆ ಕೆಲವರ ಬಾಳಿನಲ್ಲಿ ಅದೃಷ್ಟವೇ ಅದೃಷ್ಟ.

ಕೆಲವರಿಗೆ ಒಳ್ಳೆಯದು. ಕೆಲವರಿಗೆ ಕೆಟ್ಟದು ಏಕೆ ಹೀಗೆ?

ಈ ಹಿಂದೆಯೆ ಹೇಳಿದ್ದೇನೆ. ನಾವು ಹುಟ್ಟಿದಾಗಲೇ ನಮ್ಮ ಪುಣ್ಯಾನುಸಾರ / ಕಮರ್ಾನುಸಾರ ಅದೃಷ್ಟ / ದುರಾದೃಷ್ಟ ನಮ್ಮ ಬೆನ್ನು ಬೀಳುತ್ತದೆ. ಇದನ್ನು ನೋಡಿಯೇ ಸ್ತ್ರೀಯಾಗಲಿ ಪುರುಷರಾಗಲಿ ಮದುವೆ ಜೀವನ ಹೇಗೆ ಇರುತ್ತದೆ. ಯಾವ ವರ್ಷ ಆಗುತ್ತದೆ. ಏನಾದರೂ ತೊಂದರೆ ಇದೆಯೇ? ಅಡೆತಡೆಗಳಿವೆಯೇ? ಎಷ್ಟು ಮದುವೆ? ಪ್ರೇಮ ವಿವಾಹವೇ? ಅಥವಾ ಗೊತ್ತು ಪಡಿಸಿದ ಮದುವೆಯೇ? ಪ್ರೇಮ ವಿವಾಹದಲ್ಲಿ ತೊಂದರೆಯೇ ಮದುವೆ ನಂತರ ಗಂಡಾಂತರವೇ ಎಲ್ಲವನ್ನು ಅತ್ಯಂತ ನಿಖರವಾಗಿ ಹೇಳಬಹುದು. ಇಂದು ಕೇವಲ ಬೆಂಗಳೂರು ಫ್ಯಾಮಿಲಿ ಕೋಟರ್್ವೊಂದರಲ್ಲೇ ದಿನನಿತ್ಯ 100 ರಿಂದ 120 ಡಿವೋಸರ್್ ಕೇಸುಗಳು ನೊಂದಣಿಯಾಗುತ್ತಿದೆ. ಎಂತಹ ದುರಾದೃಷ್ಟ ನೋಡಿ.

ಮದುವೆಗೆ ಮೊದಲೇ ಜಾತಕ ಸರಿಯಾಗಿ ನೋಡಿಕೊಳ್ಳದಿರುವುದು ಇರುವ ಅಡೆತಡೆಗಳನ್ನು ಸರಿಯಾದ ರೀತಿಯಲ್ಲಿ ನಿವಾರಿಸಿಕೊಳ್ಳದಿರುವುದು. ಗಂಡು ಹೆಣ್ಣಿನ ಜಾತಕಗಳನ್ನು ಸರಿಯಾದ ರೀತಿಯಲ್ಲಿ ನೋಡಿ ಹೊಂದಾಣಿಕೆ ಮಾಡದಿರುವುದು. 

ಗಂಡು/ ಹೆಣ್ಣಿನ ಜಾತಕ ಇಲ್ಲದಿದ್ದರೂ ಯಾವುದೋ / ಕೆಟ್ಟ ಧೈರ್ಯದಿಂದ ಮದುವೆ ಮಾಡುವುದು. ಕೇವಲ ಗಂಡು/ ಹೆಣ್ಣಿನ ಹೆಸರಿನ ಮುಖಾಂತರ ನಕ್ಷತ್ರಗಳ ಮುಖಾಂತರ ಗಣಕೂಟ ನೋಡಿ ಮದುವೆ ಮಾಡುವುದು. ಛತ್ರಕೋಸ್ಕರ ಮದುವೆ ಮಾಡುವ ತುಂಬಾ ಹತ್ತಿರದ ಸಂಬಂಧ ಅಣ್ಣ ಮಗಳು, ಅಕ್ಕನ ಮಗಳು ಮಾವನ ಮಗಳು ಎಂದು ಏನನ್ನು ನೋಡದೇ ಮದುವೆ ಮಾಡಿ ಬಿಡುವುದು.

ಕೆಲವು ಉತ್ತಮ ನಕ್ಷತ್ರಗಳನ್ನು ಮಾತ್ರ ನೋಡಿ ಮುಖ್ಯವಾದ ದಿನಾಂಕ / ತಿಂಗಳುಗಳ ಪ್ರಭಾವ ನೋಡದೆ ಮದುವೆ ಮಾಡುವುದು. ಇಂದು ಅತ್ಯಂತ ವಿದ್ಯಾವಂತ ಬುದ್ಧಿವಂತ ಜನರು ಮದುವೆ ಎಂಬ ಬಂಧನದಲ್ಲಿ ಸಿಲುಕಿ ನರಳಿ ನರಕ ಅನುಭವಿಸುತ್ತಿದ್ದಾರೆ. ಕೆಲವೊಂದು ಉದಾಹರಣೆಗಳನ್ನು ಈ ಸಮಾಜದಲ್ಲಿ ನೋಡಿದ್ದರೆ ಒಂದು ವರ್ಗ ಬಹಳ ಕೆಳಸ್ತರದಲ್ಲಿದ್ದು ಮದುವೆ ನಂತರ ಅತ್ಯುತ್ತಮ ಮಟ್ಟಕ್ಕೆ ಹೋಗುವುದಿದೆ. ಹಾಗೆಯೇ ಅತ್ಯುತ್ತಮ ಮಟ್ಟದಲ್ಲಿದ್ದ ಕೆಲವೊಂದು ವರ್ಗ ಮದುವೆ ನಂತರ ಪಾತಾಳಕ್ಕಿಳಿದಿದ್ದೇ ಏಕೆ ಹೀಗೆ?

ಮದುವೆ ಆದ ನಂತರ ಗಂಡು/ ಗಂಡಿನ ಮನೆಯವರು ಹೆಣ್ಣಿನ ಬಗ್ಗೆ ಜರಿಯುವುದು. ನಿಮ್ಮ ಹೆಣ್ಣು ನಮ್ಮ ಮನೆಗೆ ಬಂದ ಮೇಲೆ ನಾವು ಹಾಳಾದೇವು ಅಂ ಹೆಣ್ಣಿನ ಕಡೇಯವರಿಗೆ / ಜರಿಯುವುದು / ಬೈಯುವುದು. ಸ್ಟೇಷನ್, ಕೋಟರ್್ ಅಲೆಯುವುದು ಜೀವನವನ್ನು ಹಾಳೂ ಮಾಡಿಕೊಳ್ಳುತ್ತಿದ್ದಾರೆ. ಕೆಲವೊಂದು ದುರಾದೃಷ್ಟಕರ ದಿನಾಂಕಗಳು ಮದುವೆಯ ನಂತರದ ಜೀವನ ಹೇಗಿದೆ ಎಂಬುದನ್ನು ನಿಖರವಾಗಿ ತಿಳಿಸುತ್ತವೆ.

8.17.26.7.16.25.4.13.22.31 ಇವು ಮದುವೆ ಎಂಬ ಮುಖ್ಯ ಫಟ್ಟದಲ್ಲಿ ವ್ಯಕ್ತಿಗೆ ದೋಷಗಳಿದ್ದಾಗ ಹಿಂಬಾಲಿಸಿ ಮದುವೆ ನಂತರ ನರಕವನ್ನು ತೋರಿಸುತ್ತದೆ. ಸಾಮಾನ್ಯವಾಗಿ 8.17.26.7.16.25.4.13.22.31 ಈ ದಿನಾಂಕಗಳಲ್ಲಿ ಮುದುವೆಯಾದವರು ಶೇಕಡ 90 ರಷ್ಟು ದುರಾದೃಷ್ಟ ಅನುಭವಿಸುತ್ತಿದ್ದಾರೆ.

ಸ್ತ್ರೀಯರಾಗಲಿ / ಪುರುಷರಾಗಲಿ ಪ್ರೇಮದಲ್ಲಿ ದುರಾದೃಷ್ಟವಿದ್ದರೆ ಪ್ರೇಮ ಉತ್ಪತ್ತಿಮಾಡಿ ಹೆಣ್ಣಿಗೆ ಗಂಡು ಗಂಡಿಗೆ ಹೆಣ್ಣು ಆಕರ್ಷಣೆ ಮಾಡಿ ಏನಾದರೂ ಜಗಳ ಜಲಾಟೆ ಅಥವಾ ಪರ ವಿರೋಧ ಪ್ರಾರಂಭವಾಗಿ ಮದುವೆಗೆ ಮೊದಲು ಮದುವೆ ನಂತರ ಇಬ್ಬರು ಬೇರೆ ಬೇರೆಯಾಗುತ್ತಾರೆ.

ಈ ವಿಚಾರವನ್ನು ಮೊದಲೇ ನಿಮ್ಮ ಜಾತಕ / ಜನ್ಮ ದಿನಾಂಕ /  ಕೈ ರೇಖೆ ಮುಖಾಂತರ ಅತ್ಯಂತ ನಿಖರವಾಗಿ ಹೇಳಬಹುದು. 

ಈ ರೀತಿ ತೊಂದರೆ ಇದೆಯೋ ಇಲ್ಲವೋ ಎಂಬುದನ್ನು ಪ್ರತಿಯೊಬ್ಬರು ತಿಳಿದುಕೊಳ್ಳಲೇಬೇಕು. ಪ್ರೇಮ, ಪ್ರೀತಿ ಸಮಸ್ಯೆಗೆ ಸಿಕ್ಕಿಹಾಕಿಕೊಂಡು ನರಳಿ ಆ ಕಡೆ ಈ ಕಡೆ ಬರಲಾಗದೇ  ಸಿಲುಕುವುದು ಮುಂದಿನ ಭವಿಷ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಮುಖ್ಯವಾಗಿ ಇದನ್ನು ಪ್ರತಿ ಕಾಲೇಜು ಹುಡುಗ/ಹುಡುಗಿಯರು ತಿಳಿದುಕೊಂಡು ಪ್ರೀತಿ / ಪ್ರೇಮಕ್ಕೆ ಬೀಳುವ ಮೊದಲು ಸಾವಿರ ಬಾರಿ ಯೋಚಿಸಬೇಕು. ಅಥವಾ ಪ್ರೀತಿ ಮಾಡುವ ಜಾತಕ/ ಜನ್ಮ ದಿನಾಂಕ /  ತಿಳಿದುಕೊಂಡು ಮುಂದುವರೆಯುವುದು ಒಳ್ಳೆಯದು.

ಇಂದು ಇದರಿಂದ ವಿದ್ಯಾಭ್ಯಾಸ ತೊಂದರೆ ಆರೋಗ್ಯ ತೊಂದರೆ ನೆಮ್ಮದಿ ಹಾಳು ಮಾನ ಮರ್ಯಾದೆ ಬೀದಿ ಪಾಲು ಕೊನೆಗೆ ಆತ್ಮಹತ್ಯೆ. ಇದಕ್ಕೆಲ್ಲ ಒಂದೆ ಪರಿಹಾರ ತಮ್ಮ ತಮ್ಮ ಜಾತಕಗಳನ್ನು ನೋಡಿಕೊಂಡು ಮುಂಚಿತವಾಗಿ ಎಚ್ಚರ ವಹಿಸುವುದು. ಸಾಮಾನ್ಯ ಜೋತಿಷ್ಯಗಳು ಅಕ್ಕ ಪಕ್ಕದ ಪುರೋಹಿತರು ಜೋತಿಷ್ಯದ ಜ್ಞಾನವೇ ಇಲ್ಲದವರ ಬಳಿ ಗಂಡು ಹೆಣ್ಣಿನ ಜಾತಕ ತೋರಿಸಿ ವಿರುದ್ಧವಾಗಿ ಮದುವೆ ಮಾಡಿ ಭವಿಷ್ಯ ಹಾಳು ಮಾಡಿ ಕೊಳ್ಳುವುದು ಒಳ್ಳೆದಲ್ಲ.

ಮದುವೆ ಅನ್ನುವ ಬಂಧನ ನೂರು ವರ್ಷವಾದರೂ ಬಾಳಿಕೆ ಬರಬೇಕು. ಆದ್ದರಿಂದ ಮದುವೆ ಮಾಡಬೇಕೆಂದಾಗ ಸಾವರಿ ಬಾರಿ ಯೋಚನೆ ಮಾಡಬೇಕಾಗುತ್ತದೆ. ಮುಖ್ಯವಾಗಿ ಸೂರ್ಯದೆಸೆ/ಗುರುದೆಸೆ/ಬುಧದೆಸೆ/ಕೇತುದೆಸೆ/ಶುಕ್ರದೆಸೆಗಳಲ್ಲಿ ಮದುವೆ ಮಾಡಬೇಕು.

ಶನಿದೆಸೆ/ರಾಹುದೆಸೆ/ಮಂಗಳದೆಸೆ/ಚಂದ್ರ ದೆಸೆಗಳಲ್ಲಿನ ನೀಚ ದೆಸೆಗಳಲ್ಲಿ ಆಗಿರುವ ಮದುವೆಗಳು ಇವತ್ತಿನವರೆಗೂ ಉದ್ದಾರವಾಗಿಲ್ಲ. ಕೆಟ್ಟದೆಸೆಗಳಲ್ಲಿ ಮದುವೆ ಮಾಡಿಕೊಂಡು ಬಾಳು ಪೂತರ್ಿ ನರಕ ನೋಡಬೇಕಾಗುತ್ತದೆ. 

ಗಂಡು ಮತ್ತು ಹೆಣ್ಣು ಜಾತಕ ಹೊಂದಾಣಿಕೆಯಾದರೂ ಯಾವಾಗ ಯಾವ ವರ್ಷ ಯಾವ ತಿಂಗಳು ಯಾವ ದೆಸೆ ಬಂದಾಗ ಮದುವೆ ಮಾಡಬೇಕೆಂದು ಮುಖ್ಯವಾಗಿ ತಿಳಿದುಕೊಂಡು ಅದರಂತೆ ಮುಂದುವರೆಯ ಬೇಕು. 

ದುರಾದೃಷ್ಟ ದಿನ/ದಿನಾಂಕ/ತಿಂಗಳು ಕೆಟ್ಟ ದೆಸೆಗಳಲ್ಲಿ ಮದುವೆ ಆಗುವುದರಿಂದ ಜೀವನ ಪೂತರ್ಿ ನರಕ ನೋಡುವುದರಜೊತೆಗೆ ಸಂತಾನ ನಷ್ಟ / ಒಳ್ಳೆ ಮಕ್ಕಳು ಹುಟ್ಟಿದೆ /ಇರುವುದು / ಅಂಗವಿಕಲ ಮಕ್ಕಳು ಹುಟ್ಟುವುದು ಯಾವಾಗಲೂ ಖಾಯಿಲೆಯಿಂದ ನರಳುವ ಮಕ್ಕಳ ಹುಟ್ಟುವುದು ನಡೆಯುತ್ತದೆ / ನಡೆಯುತ್ತಿದೆ.

ಮುಂದಿನ ಭವಿಷ್ಯದ ದೃಷ್ಟಿಯಿಂದ ಇದು ಬಹಳ ಮುಖ್ಯ.

ನಿಮ್ಮ ಜಾತಕದಲ್ಲಿ ಕಂಟಕ ಶನಿದೋಷ / ಕುಜ ದೋಷ/ ನಾಗಸರ್ಪದೋಷ / ಸೂರ್ಯದೋಷ/ ಶುಕ್ರ ದೋಷವಿದ್ದರೆ ಮದುವೆ ಜೀವನ ನರಕ ಖಂಡಿತ. ಆದ್ದರಿಂದ ಪ್ರತಿಯೊಬ್ಬರು ದಾಂಪತ್ಯ ಜೀವನಕ್ಕೆ ಕಾಲಿಡುವ ಮೊದಲು ನಿಮ್ಮ ಜಾತಕದಲ್ಲಿ ಯಾವ ದೋಷವಿದೆ ಎಂಬುದನ್ನು ಮುಖ್ಯವಾಗಿ ತಿಳಿದುಕೊಳ್ಳಬೇಕು.

ಒಂದು ಪಕ್ಷ ಗೊತ್ತಿಲ್ಲದೆ ಮದುವೆ ಆಗಿ ತೊಂದರೆಗೆ, ಒಳಪಟ್ಟಿದ್ದರೆ ಅಥವಾ ದುರಾದೃಷ್ಟ ದಿನ/ವರ್ಷ/ದಿನಾಂಕಗಳಿಲ್ಲ. ಮದುವೆ ಆಗಿದ್ದರೆ, ಗಾಬರಿಪಡದೇ, ದುಃಖ ಪಡದೆ. ಅದರದೇ ಆದ ಪರಿಹಾರಗಳನ್ನು ಮಾಡಿಕೊಂಡು ನೆಮ್ಮದಿ ಜೀವನ ನಡೆಸಬೇಕು. ಮೊದಲೇ ಹೇಳಿದ್ದೆನೆ ನಿಮ್ಮ ಹುಟ್ಟಿದಾಗಲೇ ಕರ್ಮಗಳು ನಿಮಗೆ ಗೊತ್ತಿಲ್ಲದಂತೆಯೇ ನಿಮ್ಮನ್ನು ಹಿಂಬಾಲಿಸಿ ನಿಮ್ಮ ಸುಖ ಸಂತೋಷ ನೆಮ್ಮದಿಯನ್ನು ಹಾಳು ಮಾಡುತ್ತದೆ ಇದಕ್ಕೆ ಯಾರು ಹೊಣೆಯಲ್ಲ. ಆದರೆ ಮುಂಚಿತವಾಗಿ ಅಥವಾ ನಂತರ ಗುರುತಿಸಿಕೊಂಡು ಸೂಕ್ತ ಪರಿಹಾರವನ್ನು ಮಾಡಿಕೊಳ್ಳಬೇಕು. 

ಅದೃಷ್ಟದ ಹೆಸರಿನ ಬಗ್ಗೆ ಮೊದಲ ಹಂತದಲ್ಲಿ ಹೇಳಿದ್ದೇನೆ. ಅದೃಷ್ಟದ ಹೆಸರು ಎಷ್ಟು ಮುಖ್ಯವೋ ಅಷ್ಟೆ ಮುಖ್ಯ ಇದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡು ಸರಿಯಾದ ರೀತಿಯಿಲ್ಲ ಸಹಿ ಮಾಡುವುದನ್ನು ಕಲಿಯಬೇಕು.

ಸಹಿಯನ್ನು ಇಷ್ಟ ಬಂದ ಹಾಗೆ ಹಾಕಬಾರದು. ಚುಕ್ಕೆ ಹಿಡಿದು. ಅಡ್ಡಗೆರೆ ಎಳೆಯುವುದ. ಹೂಗಳು ಬಿಡಿಸುವುದು. ರಂಗೋಲಿ ಹಾಕುವುದು. ಅಲಂಕಾರ ಮಾಡುವುದು ಗೊಂಬೆಗಳನ್ನು ಮತ್ತು ಮುಖ ಚಿತ್ರವನ್ನು ಬಿಡಿಸುವುದು. ಇಷ್ಟ ಬಂದಹಾಗೆ ಗೀಚುವುದು. ಅಕ್ಷರದ ಮೇಲೆ ಅಕ್ಷರ ಬರೆಯುವುದು ಹೆಸರಿನ ಕೊನೆಯಲ್ಲಿ ಮೇಲಕ್ಕೆ ಹೋಗಿ ಕೆಳಗೆ ಗೆರೆ ಎಳೆಯುವುದು ಸಹಿ ಮಾಡುವಾಗ ಸೊನ್ನೆಗಳನ್ನು ಹಾಕುವುದು. ಸಹಿ ಮಾಡುವವರಿಗೆ ಗುರುತಿಸಲು ಆಗದಂತೆ ಸಹಿ ಮಾಡುವುದು. ಹೆಸರಿನ ಸ್ಪೆಲಿಂಗ್ಗಳನ್ನು ಬಿಟ್ಟಿ ಕೇವಲ ಒಂದು ಎರಡು ಅಕ್ಷರಗಳಿಂದ ಸಹಿ ಮಾಡುವುದು ಒಳ್ಳೆಯದಲ್ಲ.

ಹಾಗೆಯೇ ಮುಂದುವರೆದರೆ ಜೀವನದಲ್ಲಿ ಎದುರು ನೋಡದ ಸಮಸ್ಯೆಗಳು/ದುರ್ಘಟನೆಗಳು ಸಂಭವಿಸುತ್ತದೆ. ಸಾವು - ನೋವುಗಳು ದುಃಖಕರವಾದ ಸಂಗತಿಗಳು ನಡೆಯುತ್ತವೆ.

ನ್ಯಾಯಾಲಯದ ಸಮಸ್ಯೆಗಳು ಸ್ನೇಹಿತ ಬಂಧುಗಳಿಂದ ತೊಂದರೆ ವೈರಿಗಳಿಂದ ತೊಂದರೆ ಮಾನಸಿಕ ದೈಹಿಕ ತೊಂದರೆ ಉದ್ಭವವಾಗುತ್ತದೆ. ಸಹಿ ಎಂಬುವುದು ಹಣೆಬರಹವನ್ನು ನಿರ್ಧರಿಸುತ್ತದೆ. ಆದ್ದರಿಂದ ಸಹಿ (ಸಹಿ)  ಮಾಡುವಾಗ ಪೂತರ್ಿ ಹೆಸರನ್ನು ಸಹಿ ಮಾಡಬೇಕು. ಮಾಡಿದ ನಂತರ ಕೊನೆಯಲ್ಲಿ ಮೇಲೆ ಎತ್ತಿ ಕೊನೆಗೊಳಿಸಬೇಕು.

ಪ್ರತಿ ದಿನ ಸೂಯರ್ೋದಯಕ್ಕೆ ಮೊದಲು ಎದ್ದು ನಿತ್ಯ ಕರ್ಮಗಳನ್ನು ಮುಗಿಸಿಕೊಂಡು ನಿಮ್ಮ ದೇವರ ಕೋಣೆಯಲ್ಲಿ ಪೂವರ್ಾಭಿಮುಖವಾಗಿ ಕುಳಿತು ನಿಮ್ಮ ಜನ್ಮ ದಿನಾಂಕಕ್ಕೆ ಸಂಬಂಧಪಟ್ಟ ಮಂತ್ರ, ಜಪ ಸ್ತೋತ್ರ ಜಪ, ಬೀಜಾಕ್ಷರ ಜಪ ಮತ್ತು ಗ್ರಹಗಳಿಗೆ ಸಂಬಂಧಪಟ್ಟ ಸಹಸ್ರನಾಮ, ಕವಚ, ಅಷ್ಟೋತ್ತರಗಳನ್ನು ಪ್ರತಿ ನಿತ್ಯ ತಪ್ಪದೆ ಜಪಿಸಬೇಕು. ನಂತರ ನಿಮ್ಮ ಹೆಸರನ್ನು ಕೂಡ ಬರೆಯುತ್ತ ಸದಾ ಕಾಲ ನೆನಪಿಸಿಕೊಳ್ಳುತ್ತಾ ನಿಮ್ಮ ಹೆಸೆರಿಗೆ ನೀವೇ ಶಕ್ತಿ ತುಂಬಿಕೊಳ್ಳಬೇಕು.

ನಿಮ್ಮ ಅದೃಷ್ಟದ ಹೆಸರೇ ನಿಮ್ಮ ರಕ್ಷಣಾ ಕವಚ.

Menu

Go to top