ಇದು ಬಹಳ ಮುಖ್ಯ ಪ್ರತಿ ವ್ಯಕ್ತಿ ಈ ಭೂಮಿಯ ಮೇಲೆ ಜನಿಸಿದಾಗಿನಿಂದ ಸಾಯುವವರೆಗೂ ಒಳ್ಳೆ ವರ್ಷಗಳು / ಕೆಟ್ಟ ವರ್ಷಗಳು ಎಂದು ಪ್ರಾರಂಭವಾಗುತ್ತದೆ. ಇದು ಒಬ್ಬ ವ್ಯಕ್ತಿಯಿಂದ ಇನ್ನೊಂದು ವ್ಯಕ್ತಿಗೆ ಬಹಳ ಬದಲಾವಣೆಯಿರುತ್ತದೆ. ವ್ಯಕ್ತಿ ಹುಟ್ಟಿದ ಜಾತಕದಲ್ಲಿನ ಇನ್ನಿತರ ಗ್ರಹಗತಿಗಳ ಪ್ರಭಾವವನ್ನು ನೋಡಿ ಪ್ರತಿ ವರ್ಷದಲ್ಲಿ ಬರುವ ವರ್ಷ ಗ್ರಹಗಳ ವ್ಯಕ್ತಿಗೆ ಅದೃಷ್ಟ ಕೂಡುತ್ತವೆಯೆ ಅಥವಾ ದುರಾದೃಷ್ಟ ಕೂಡುತ್ತವೆಯೋ ಎಂಬುದನ್ನು ನಿರ್ಧರಿಸಬೇಕಾಗುತ್ತದೆ.

ಜೋತಿಷ್ಯ ಶಾಸ್ತ್ರ ಹಾಗೂ ಸಂಖ್ಯಾ ಶಾಸ್ತ್ರ ಬೇರೆ ಅಲ್ಲ. ಎರಡು ಒಂದೇ ಆದರೆ ಲೆಕ್ಕಚಾರಗಳು ಬೇರೆ ಬೇರೆ. ಸಂಖಾ ಶಾಸ್ತ್ರದಲ್ಲಿ ಬರುವ ವರ್ಷ ಲೆಕ್ಕಾಚಾರವಿದೆಯಲ್ಲ. ಇದು ನೂರಕ್ಕೆ ನಿಖರವಾದ ಭವಿಷ್ಯ. ಇದು ಕೇವಲ ಮಾತಲ್ಲ. ಇಲ್ಲಿಯವರೆಗೂ ನಡೆಸಿರುವ ಸಂಶೋಧನಾತ್ಮಕ ವರದಿ. ವ್ಯಕ್ತಿ ಹುಟ್ಟಿದಾಗ ಬರುವ ಪೂರ್ವಜನ್ಮ ಕರ್ಮ ಹಾಗೂ ತಂದೆ-ತಾಯಿಗಳ ಕರ್ಮ ಗ್ರಹಗತಿಗಳ ಮೂಲಕ ವ್ಯಕ್ತಿಯ ಬಾಲ್ಯ ಯೌವ್ವನ ಮಧ್ಯಮ ಹೀಗೆ ಎಲ್ಲ ಹಂತಗಳಲ್ಲಿ ಹಿಂಬಾಲಿಸುತ್ತದೆ. ವ್ಯಕ್ತಿಯ ಕಮರ್ಾನುಸಾರ ಗ್ರಹಗತಿಗಳ ಪ್ರಭಾವದಲ್ಲಿ ಕೆಲವರಿಗೆ ಅತೀ ಹೆಚ್ಚಿನ ಪ್ರಭಾವವಿದ್ದರೆ ಕೆಲವರಿಗೆ ಕಡಿಮೆ ಪ್ರಭಾವ ಹಾಗೆ ಕೆಲವರಿಗೆ ಮಾಧ್ಯಮ ಪ್ರಭಾವವಿರುತ್ತದೆ.

ಹುಟ್ಟಿದಾಗಿನಿಂದ ಯಾವ ವರ್ಷದಲ್ಲಿ ಹುಟ್ಟಿದ್ದೀರಿ. ನಿಮ್ಮ ಬಾಲ್ಯ ಹೇಗಿರುವುದು. ಆರೋಗ್ಯ, ವಿದ್ಯಾಭ್ಯಾಸ, ಉದ್ಯೋಗ, ವ್ಯವಹಾರ, ವ್ಯಾಪಾರದಿಂದ ಹಿಡಿದು ಮದುವೆ ಯಾವ ವರ್ಷ, ಯಾವ ವರ್ಷ ಅದೃಷ್ಟ, ಯಾವ ವರ್ಷ ದುರಾದೃಷ್ಟ ಯಾವ ವರ್ಷ ಗಂಡಾಂತರಗಳು ಎಲ್ಲವನ್ನು ಪ್ರತಿವರ್ಷ ಹೇಳುತ್ತ ಹೋಗುತ್ತವೆ. ನೀವು ಏನೇ ಬುದ್ಧಿ ಉಪಯೋಗಿಸಿ ತಲೆ ಕೆಳಗೆ ಮಾಡಿ ನಿಮ್ಮ ಇಷ್ಟ ಬಂದಂತೆ ನಡೆಯಲು ಹೋದರೆ ನೀವು ಯಾವುದೆ ರೀತಿಯ ಯಶಸ್ಸು ಕಾಣಸಿಗುವುದಿಲ್ಲ. ನಿಮ್ಮ ವರ್ಷದ ಲೆಕ್ಕಾಚಾರದ ಪ್ರಭಾವದಂತೆಯೇ ನಿಮ್ಮ ಜೀವನ ನಡೆಯುತ್ತಿರುತ್ತದೆ.

ಹಲವಾರು ವರ್ಷಗಳ ಕಾಲ ಯಶಸ್ವಿಯಾಗಿ ನಡೆಯುತ್ತಿರುವ ವ್ಯವಹಾರ, ವ್ಯಾಪಾರ, ಉದ್ಯೋಗವಾಗಲಿ ನಿಮ್ಮ ಕೆಟ್ಟ ವರ್ಷ ಪ್ರಾರಂಭವಾಗುತ್ತಿದ್ದಂತೆ ಇದ್ದಕ್ಕಿದ್ದಂತೆಯೇ ನಿಂತು ಹೋಗುತ್ತದೆ ಅಥವಾ ನಷ್ಟವಾಗುತ್ತದೆ. ಬಹಳ ಚೆನ್ನಾಗಿದ್ದ ಸಂಸಾರ ಛಿದ್ರವಾಗುತ್ತದೆ. ಚೆನ್ನಾಗಿದ್ದ ಆರೋಗ್ಯ ದಿಢೀರನೆ ಕೈ ಕೂಡುತ್ತದೆ. ಹಾಗೇ ಆರಂಭವಾದ ಕಷ್ಟ-ನಷ್ಟುಗಳು ಹಲವಾರು ವರ್ಷ ಮುಂದುವರೆಯಬಹುದು. ಹಾಗೆಯೇ ಒಳ್ಳೆ ಸಮಯಗಳು ಕೂಡ ಹಾಗೇ ಪ್ರಾರಂಭವಾಗುತ್ತದೆ.

ಓದಿನಲ್ಲಿ ಹಿಂದೆ ಇದ್ದಾಗ ದಿಡೀರನೆ ಬದಲಾವಣೆ ಮದುವೆನೇ ಇಲ್ಲದೇ ಇದ್ದಾಗ ಮದುವೆ ಭಾಗ್ಯ ಕೂಡಿ ಬರುವುದು. ನಿಂತು ಹೋಗಿರುವ ವ್ಯಾಪಾರ, ವ್ಯವಹಾರಗಳು ಚೆನ್ನಾಗಿ ನಡೆಯುವುದು, ಧನಲಾಭ, ಆಸ್ತಿ ಲಾಭ, ಪ್ರಮೋಷನ್, ಹೆಸರು ಕೀತರ್ಿ ಹೀಗೆ ಎಲ್ಲವು ನಡೆಯುವುದು. ಪ್ರತಿ ವ್ಯಕ್ತಿಗೆ ಹುಟ್ಟಿದಾಗಿನಿಂದ ಅವರವರ ಕಮರ್ಾನುಸಾರ ಗ್ರಹಗಳು ನಿಯಂತ್ರಿಸುತ್ತವೆ. ಹಾಗೆಯೇ ನವಗ್ರಹಗಳು ಕೂಡ ಪ್ರತಿ ವ್ಯಕ್ತಯನ್ನು ಹಿಂಬಾಲಿಸುತ್ತದೆ. ಹಾಗೂ ತಮ್ಮ ಪ್ರಭಾವವನ್ನು ವ್ಯಕ್ತಿಯ ಕರ್ಮ / ಪುಣ್ಯಕ್ಕೆ ಸಂಬಂಧ ಪಟ್ಟಂತೆ ಬೀರುತ್ತ ಹೋಗುತ್ತವೆ. ಇದೇ ಒಳ್ಳೆಯದು ಕೆಟ್ಟದು.

ಕೆಟ್ಟ ಜಾತಕದಲ್ಲಿ ಹುಟ್ಟಿದ ವ್ಯಕ್ತಿ ಹುಟ್ಟಿದಾಗಿನಿಂದ ಸಾಯುವವೆ ಕಷ್ಟ-ನಷ್ಟಗಳಿಗೆ ಒಳಗಾಗಿ ನರಳುತ್ತಾನೆ. ಒಳ್ಳೆಯ ಜಾತಕದಲ್ಲಿ ಹುಟ್ಟಿದ ವ್ಯಕ್ತಿ ಮೊದಲಿನಿಂದ ಕೊನೆಯವರೆಗೂ ಸುಖವಾಗಿರುತ್ತಾನೆ.

ಪಾಪ ಗ್ರಹಗಳನ್ನು ಮೊದಲೇ ಗುರುತಿಸಿ ಸರಿಪಡಿಸಿಕೊಳ್ಳದಿದ್ದರೆ ವ್ಯಕ್ತಿ ಬೆಳೆಯುವ ಹಂತದಿಂದ ಹಿಡಿದು ಕೆಟ್ಟ ದೆಸೆಗಳು ಬಂದಾಗ ನರಕವನ್ನು ಅನುಭವಿಸುತ್ತಾನೆ.

ಆದ್ದರಿಂದ ಪ್ರತಿ ವ್ಯಕ್ತಿ ಸ್ತ್ರೀಯಾಗಲಿ ಪುರುಷನಾಗಲಿ, ಮಕ್ಕಳಾಗಲಿ, ವಯಸ್ಸಾದವರಾಗಲಿ. ಪ್ರತಿ ವರ್ಷ ನಿಮ್ಮ ಹಣೆಬರಹ ಹೇಗಿದೆ ಬಂದು ಮುಖ್ಯವಾಗಿ ತಿಳಿದುಕೊಳ್ಳಬೇಕು.

ಜನವರಿ- 14, ಮಾಚರ್್-23 , ಜುಲೈ-7, ನವೆಂಬರ್-17  ಪ್ರತಿವರ್ಷ ಬದಲಾವಣೆ ಯಾವ ಸಮಯ. ನೀವು ಹುಟ್ಟಿದಾಗಿನಿಂದ ನಿಮ್ಮನ್ನು ಹಿಂಬಾಲಿಸುವ ನವಗ್ರಹಗಳು ನಿಮಗೆ ಯಾವಾಗ ಅದೃಷ್ಟ ತರುತ್ತದೆ. ದುರಾದೃಷ್ಟ ತರುತ್ತವೆ ಎಂಬುದನ್ನು ಪ್ರತಿಯೊಬ್ಬರು ನವೆಂಬರ್ ತಿಂಗಳಲ್ಲಿ ಮುಖ್ಯವಾಗಿ ತಿಳಿದು ಕೊಳ್ಳಲೇಬೇಕು. 

ದುರಾದೃಷ್ಟ ಗ್ರಹಗಳಿದ್ದರೆ, ಮೊದಲೇ ಅಡ್ವಾನ್ಸಾಗಿ ಪರಿಹಾರ ಮಾಡಕೊಳ್ಳಬೇಕು. ಇಲ್ಲದಿದ್ದರೆ ಸಮಸ್ಯೆಗಳು ಗ್ಯಾರಂಟಿ. ಕೆಟ್ಟ ದೆಸೆಗಳು ಅಂದರೆ ನನ್ನ ಸಂಶೋಧನೆ ಪ್ರಕಾರ ನಮ್ಮನ್ನು ನಾವು ರಕ್ಷಣೆ ಮಾಡಿಕೊಳ್ಳುವ ಸಮಯ. ಇದನ್ನು ಅರಿಯದೆ, ವಿರುದ್ಧವಾಗಿ ನೀವು ನಡೆದುಕೊಂಡರೆ ಸಮಸ್ಯೆಯನ್ನು ನೀವೇ ಆಹ್ವನಿಸಿದಂತೆ.

ನಿಮಗೆ ಒಳ್ಳೆಯ ಸಮಯ ಮತ್ತು ಕೆಟ್ಟ ಸಮಯ ಬರುವುದನ್ನು ಮುಂಚಿತವಾಗಿಯೇ ತಿಳಿಸುವ ಈ ವರ್ಷಭವಿಷ್ಯ ಪ್ರತಿ ಮಾನವ ಜೀವನದಲ್ಲಿ ಪ್ರಮುಖವಾದ ವಿಷಯ ಇದನ್ನು ಎಲ್ಲರು ಪಾಲಿಸಲೇ ಬೇಕು.

ಹುಟ್ಟಿದ ನಂತರ ಕೊನೆಯ ಸಾವು ಕೂಡ ಯಾವ ವರ್ಷ ಎಂದು ತಿಳಿಸುವ ಏಕೈಕ ಮಾರ್ಗ ಇದು.

Menu

Go to top