ಇಡೀ ಜೀವ ಕೋಟಿಯನ್ನು ನಿಯಂತ್ರಿಸುವ ನವಗ್ರಹಗಳಾದ ಸೂರ್ಯ, ಚಂದ್ರ ಗುರು, ರಾಹು, ಬುಧ, ಶುಕ್ರ, ಶನಿ, ಮಂಗಳ  ತನ್ನದೇ ಆದ ಸ್ವಂತ ಲೋಹದ ಪ್ರಭಾವವನ್ನು ಹೊಂದಿದೆ. ಈ ಭೂಮಿಯಲ್ಲಿ ಸಿಗುವ ಅನೇಕ ಲೋಹಗಳಲ್ಲಿ ಪಂಚಲೋಹಗಳು ಬಹಳ ಪ್ರಸಿದ್ಧಿ ಪಡೆದಿದೆ.

ಸೂರ್ಯ = ತಾಮ್ರ / ಚಂದ್ರನಿಗೆ = ಬೆಳ್ಳಿ / ಗುರು= ಚಿನ್ನ/ ಬುಧ= ಪಾದರಸ / ರಾಹು=ಸೀಸ / ಶುಕ್ರ=ಬೆಳ್ಳಿ  ಶನಿ= ಕಬ್ಬಿಣ / ಮಂಗಳ= ಕಂಚು ಹೀಗೆ ನವಗ್ರಹಗಳು ಕೂಡ ತಮ್ಮದೆ ಪ್ರಭಾವದಿಂದ ನಾನಾ ಲೋಹಗಳ ಜೊತೆ ಸಂಬಂಧವನ್ನು ಹೊಂದಿವೆ.

ಈ ತೀತಿಯ ನವಗ್ರಹಗಳ ನಿಯಂತ್ರಣದಲ್ಲಿರುವ ಮನುಷ್ಯ ಜೀವಕೋಟಿ ನಾನಾ ರೀತಿಯಾಗಿ ಮೇಲೆ ತಿಳಿಸಿದ ನಾನಾ ಲೋಹಗಳ ಜೊತೆ ಸಂಬಂಧ ಹೊಂದಿದ್ದಾನೆ. ಸುಮಾರು 90% ಭಾಗದ ಜನರಿಗೆ ಚಿನ್ನವೆಂದರೆ ಬಹಳ ಇಷ್ಟ. ಇಂದು ಎಲ್ಲ ಲೋಹಗಳಿಗಿಂತ ಚಿನ್ನ ದಿನೇ ಗಗನ ಏರುತ್ತಿರುವುದು ನೋಡಿದರೆ ಚಿನ್ನದ ಪ್ರಾಮುಖಯತೆ ಮಹತ್ವ ಬೆಲೆ ಎಷ್ಟು ಎಂಬುದನ್ನು ಗಮನಿಸಬಹುದು. ಇಂದು ಎಲ್ಲರೂ ಚಿನ್ನವನ್ನು ಇಷ್ಟ ಪಡುತ್ತಾರೆ. ಮಕ್ಕಳಿಂದ ಹಿಡಿದು ಮಹಿಳೆಯವರೆಗೂ ಚಿನ್ನದ ಹುಚ್ಚು ಹೆಚ್ಚು ಇಂದು ಹಲವಾರು ಜನ ಪುರುಷ / ಮಹಿಳೆಯರು ಕೇಜಿ ಗಟ್ಟಲೆ ಚಿನ್ನವನ್ನು ಕೂಡಿ ಹಾಕುವುದರಲ್ಲಿ ಮಗ್ನರಾಗಿದ್ದಾರೆ. ಆದರು ಕೂಡ ಎಷ್ಟೊ ಜನರಿಗೆ ಒಂದು ಗ್ರಾಂ. ಚಿನ್ನ ಸಂಪಾದನೆ ಮಾಡಲು ಸಾಧ್ಯವಾಗುತ್ತಿಲ್ಲ. ಎಷ್ಟೋಜನರಿಗೆ ಮಣಗಟ್ಟಲೇ ಕೆಜಿಗಟ್ಟಲೇ ಬಂಗಾರವಿದ್ದರೂ ಒಂದು ಗ್ರಾಂ. ಬಂಗಾರವನ್ನು ಮೈ ಮೇಲೆ ಹಾಕಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಕೆಲವರಿಗೆ ಮೈ ತುರಿಕೆ, ಅಲಜರ್ಿ, ಬಂಗಾರ ಧರಿಸಿದ ನಾನಾ ಸಮಸ್ಯೆಗಳು ಉದ್ಭವವಾಗಿದೆ.

ಹಾಗೇ ಬಂಗಾರ ಮಾತ್ರ ಅಲ್ಲ ಕೆಲವರಿಗೆ ಬೆಳ್ಳಿ ಆಗಿ ಬರುವುದಿಲ್ಲ. ಕಬ್ಬಿಣ ಆಗಿ ಬರುವುದಿಲ್ಲ. ಕಂಚು ಆಗಿ ಬರುವುದಿಲ್ಲ. ಈ ಮೇಲೆ ತಿಳಿಸಿದ ಲೋಹಗಳಲ್ಲಿ ವ್ಯವಹಾರಗಳನ್ನು ಇಟ್ಟುಕೊಂಡಾಗ ಕೆಲವರಿಗೆ ಆಗಿ ಬರುತ್ತದೆ. ಕೆಲವರಿಗೆ ಆಗಿ ಬರುವುದಿಲ್ಲ. ಏಕೆ ಈ ರೀತಿಯ ವ್ಯತ್ಯಾಸಗಳು? ಮೇಲೆ ತಿಳಿಸಿದಂತೆ ಇಡೀ ನವಗ್ರಹಗಳಲ್ಲಿ ಹುಟ್ಟುವ ಮಾನವ ಜೀವಿ ಕೂಡ ತನ್ನದೇ ಆದ ಗ್ರಹಗಳ ನಿಯಂತ್ರಣದಲ್ಲಿರುತ್ತಾರೆ. ಯಾರು ಯಾವ ಗ್ರಹದಲ್ಲಿ ಜನಿಸುವರೋ ಆ ಗ್ರಹದ ಬಗ್ಗೆ ಮುಖ್ಯವಾಗಿ ತಿಳಿದುಕೊಳ್ಳಬೇಕು. ಜಾತಕದಲ್ಲಿ ಗುರು ನೀಚನಾಗಿದ್ದರೆ ಅಂತಹ ವ್ಯಕ್ತಿಗಳಿಗೆ ಚಿನ್ನ ಆಗಿ ಬರುವುದಿಲ್ಲ. ನಂತರ ಚಿನ್ನ ಧರಿಸಿದಾಗ ಕೂಡ ನಾನಾ ಸಮಸ್ಯೆಗಳು ಉದ್ಭವವಾಗುತ್ತದೆ. ಶನಿ ನೀಚನಾಗಿದ್ದಾಗ ಕಬ್ಬಿಣ ವ್ಯವಹಾರಗಳು ಆಗಿ ಬರುವುದಿಲ್ಲ.

ಗ್ರಹಗತಿಗಳ ತಾರತಾಮ್ಯದಿಂದ ಉಂಟಾಗುವ ಈ ವ್ಯತ್ಯಾಸಗಳು ಎಲ್ಲ ಮಾನವರ ಮೇಲೆ ಆಗುತ್ತದೆ. ಆದ್ದರಿಂದ ಯವುದೇ ಲೋಹಕ್ಕೆ ಸಂಬಂಧ ಪಟ್ಟಂತೆ ವ್ಯವಹಾರ ಮಾಡುವುದಕ್ಕೆ  ಮೊದಲು ನಿಮ್ಮ ನಿಮ್ಮ ಜಾತಕಗಳ ಉಚ್ಛತ್ವ/ನೀಚತ್ವ ನೋಡಿಕೊಳ್ಳಬೇಕು.

Menu

Go to top