9 ನವಗ್ರಹಗಳ ನಿಯಂತ್ರಣದಲ್ಲಿರುವ ನಮಗೆ ನಮ್ಮ ಕಮರ್ಾನುಸಾರ ಪುಣ್ಯಾನುಸಾರ ಹೇಗೆ ಅದೃಷ್ಟ ದುರಾದೃಷ್ಟ ನಮ್ಮನ್ನು ಹಿಂಬಾಲಿಸುವುದೋ ಹಾಗೆಯೇ ನಾವು ವಾಸ ಮಾಡುವ ಭೂಮಂಡಲವು ಕೂಡ ಪಂಚಭೂತಗಳ ನಿಯಂತ್ರಣದಲ್ಲಿದೆ.

ನವಗ್ರಹಗಳಲ್ಲಿ ಹೇಗೆ ಶತ್ರುತ್ವ / ಮಿತ್ರುತ್ವ ಇದಿಯೊ/ ಹಾಗೆಯೇ ಪಂಚಭೂತಗಳಲ್ಲಿ ಮಿತ್ರುತ್ವ / ಶತ್ರುತ್ವವಿದೆ.

ಒಬ್ಬ ವ್ಯಕ್ತಿಗೆ ಅದೃಷ್ಟ ಕೊಟ್ಟ ಗ್ರಹ ಅದೇ ಇನ್ನೊಬ್ಬ ವ್ಯಕ್ತಿಗೆ ದುರಾದೃಷ್ಟ ಕೊಡುತ್ತದೆ.  ಒಬ್ಬ ವ್ಯಕ್ತಿಗೆ ಅದೃಷ್ಟ ಕೊಟ್ಟ ದಿಕ್ಕು ಅದೇ ಇನ್ನೊಬ್ಬ ವ್ಯಕ್ತಿಗೆ ದುರಾದೃಷ್ಟ ಕೊಡುತ್ತದೆ.

ಈ ಹಿಂದೆ ಹೇಳಿದ ಹಾಗೇ ನವಗ್ರಹಗಳು 5 ಪಂಚಭೂತಗಳ ನಿಯಂತ್ರಣದಲ್ಲಿರುವ ನಾವು ಯಾವ ಗ್ರಹದ ನಿಯಂತ್ರಣದಲ್ಲಿದ್ದೇವೆ. ಈ ಗ್ರಹಕ್ಕೆ ಯಾವ ದಿಕ್ಕು ಅನುಕೂಲ ಯಾವ ದಿಕ್ಕು ಅನಾನುಕೂಲ ಎಂಬುದನ್ನು ತಿಳಿದು ಕೊಳ್ಳಬೇಕು. ಇದು ಬಹಳ ಮುಖ್ಯ. ನವಗ್ರಹಗಳಿಗೂ ಪಂಚಭೂತಗಳಿಗೂ ಒಂದು ಮೂಖ್ಯವಾದ ಸಂಬಂಧವಿದೆ.

ಜ್ಯೋತಿಷ್ಯ ಬೇರೆ, ವಾಸ್ತು ಶಾಸ್ತ್ರ ಬೇರೆ ಎಂದು ಹಲವಾರು ಜನ ವಾದ ಮಾಡುವುದಿದೆ. ಇದು ತಪ್ಪು ವಾದ. ಆಕಾಶ ಕಾಯಗಳಿಗೂ ಭೂಮಿಗೊ ಇರುವ ಸಂಬಂಧ ಹೇಗೆ ಎಂಬುದನ್ನು ಈ ಚಿತ್ರ ನೋಡಿ. ಹೀಗೆ ಗ್ರಹಗತಿಗಳಿಗೂ ಭೂಮಿಯ ಅಷ್ಟ ದಿಕ್ಕುಗಳಿಗೂ ಸಂಬಂಧವಿದೆ.

ನೀವು ನಿಮ್ಮ ಜನ್ಮ ಸಂಖ್ಯೆ ಭವಿಷ್ಯ ಸಂಖ್ಯೆ ಅಥವಾ ಜಾತಕದಲ್ಲಿನ ಗ್ರಹಗತಿಗಳಲ್ಲಿನ ಉಚ್ಛಸ್ಥಾನ ಹಾಗೂ ನೀಚ ಸ್ಥಾನ ನೋಡಿಕೊಂಡು ನಿಮ್ಮ ಉಚ್ಛಗ್ರಹ (ಕಠಣತಜ ಕಟಚಿಟಿಜಣ) ಯಾವುದು ಆ ಗ್ರಹಕ್ಕೆ ಅಷ್ಟ ದಿಕ್ಕುಗಳಲ್ಲಿನ ಯಾವ ದಿಕ್ಕು ಅದೃಷ್ಟ ಹೊಂದುತ್ತದೆ ಎಂಬುದನ್ನು ತಿಳಿದುಕೊಂಡಾಗ ಅದೃಷ್ಟ ಆ ದಿಕ್ಕಿನಿಂದ ನಿಮಗೆ ಸಿಗುತ್ತದೆ.

ಬಾಲ್ಯದಿಂದ ಯೌವ್ವನ, ಮಧ್ಯಮ ಮುಪ್ಪಿನವರೆಗೂ ನೀವು ಮಾಡುವ ತೊಡಗಿಸಿಕೊಳ್ಳುವ ವಿದ್ಯೆ, ಉದ್ಯೋಗ, ವ್ಯವಹಾರ, ವ್ಯಾಪಾರ, ಮದುವೆ ಮುಖ್ಯವಾಗಿ ನಿದ್ದೆ ಎಲ್ಲವನ್ನು ಕೂಡ ನಿಮ್ಮ ಅದೃಷ್ಟ ಸಂಖ್ಯೆಗೆ ಹೊಂದುವಂತ ಅದೃಷ್ಟ ದಿಕ್ಕುಗಳಲ್ಲಿ ಮಾಡಿದಾಗ ನಿಮಗೆ ಅದೃಷ್ಟ ಗ್ಯಾರಂಟಿ. ಅದೇ ನಿಮ್ಮ ಅದೃಷ್ಟ ಸಂಖ್ಯೆಗೆ ಹೊಂದದ ದಿಕ್ಕುಗಳಲ್ಲಿ ನೀವು ಓದುವ ದಿಕ್ಕು, ಕೂರುವ ದಿಕ್ಕು, ವ್ಯವಹಾರ ಮಾಡುವ ದಿಕ್ಕು ಬದಲಾದರೇ ದುರಾದೃಷ್ಟ ಖಂಡಿತ.............

ನಿಮ್ಮ ಜೀವನ ಮುಖ್ಯವಾಗಿ ಪ್ರಕೃತಿಗೆ ಹೊಂದುವಂತಿರಬೇಕು ಇದೇ ದಿಕ್ಕುಗಳ ಅದೃಷ್ಟ.

ನೀವು ವಾಸ ಮಾಡುವ ಮನೆ, ಕಛೇರಿ, ಫ್ಯಾಕ್ಟರಿ, ಬಂಗಲೆ ಎಲ್ಲವು ನಿಮ್ಮ ಅದೃಷ್ಟ ದಿಕ್ಕುಗಳಲ್ಲಿದ್ದು ವಾಸ್ತು ನಿಯಮದಂತೆ ಇರಬೇಕು. ನಿಮ್ಮ ವಾಸಸ್ಥಳ ವಾಸ್ತುವಿಗೇ ವಿರುದ್ಧವಾಗಿದ್ದಾಗ ದುರಾದೃಷ್ಟ ಖಂಡಿತ.

 

 

Menu

Go to top