ಪ್ರಪಂಚದ ಮಾನವ ಜೀವಕೋಟಿಯನ್ನು ಹೇಗೆ ನವಗ್ರಹಳು ನಿಯಂತ್ರಣದಲ್ಲಿಟ್ಟು ಕೊಂಡಿದ್ದರೋ ಹಾಗೆಯೇ ಒಂದೊಂದು ಗ್ರಹಗಳನ್ನು ಅಧೀನ ದೇವತೆಗಳು ತಮ್ಮ ನಿಯಂತ್ರಣದಲ್ಲಿಟ್ಟುಕೊಂಡಿದ್ದಾರೆ.

ಗ್ರಹಗಳು ನಮ್ಮನ್ನು ನಿಯಂತ್ರಿಸಿದ್ದರೆ, ಗ್ರಹಗಳನ್ನು ಅದೇ ದೇವರು ನಿಯಂತ್ರಿಸುತ್ತಾರೆ. ಗ್ರಹಗಳಿಂದ ನಾವು ತೊಂದರೆಗಳನ್ನು ಸಮಸ್ಯೆಗಳನ್ನು ಅನುಭವಿಸುತ್ತಿದ್ದಾಗ ಅದರದೇ ಆದ ಅಧೀನ ದೇವರುಗಳಿಗೆ ನಾವು ಮೊರೆ ಹೋದಾಗ ಆಯಾ ಗ್ರಹಗಳು ಅಧೀನ ದೇವರುಗಳನ್ನು ಪೂಜಿಸುವುದರಿಂದ ನಿಯಂತ್ರಣಕ್ಕೆ ಬಂದು ಶಾಂತಿಯಾಗಿ ನಮಗೆ ಆ ಗ್ರಹಗಳಿಂದ ಬಂದಿರುವ ಸಮಸ್ಯೆಗಳು ನಿವಾರಣೆಯಾಗುತ್ತವೆ.

ಈ ಸಂದರ್ಭದಲ್ಲಿ ನಿಮಗೊಂದು ವಿಷಯ ತಿಳಿಯಲು ಇಷ್ಟ ಪಡುತ್ತೇನೆ. ಈ ಜೀವ ಜಗತ್ತಿನಲ್ಲಿ ಹುಟ್ಟು ಹೇಗೆಯೋ ಹಾಗೆ ಸಾವು ಕೂಡ, ಹುಟ್ಟಿದಾಗಿನಿಂದ ಕೊನೆ ಸಾಯುವವರೆಗೂ ಕೆಲವು ಸಮಯ ಕಷ್ಟ ಕೆಲವು ಸಮಯ ಸುಖ ಅಥವಾ ಹುಟ್ಟಿದಾಗಿನಿಂದ ಕೊನೆವರೆಗೂ ನಾನಾ ಸಮಸ್ಯೆಗಳು ರೋಗ ರುಜಿಗಳು ನೆಮ್ಮದಿ ನಷ್ಟ ಹೀಗೆ ನಾನಾ ತರಹ.

ಒಬ್ಬ ವ್ಯಕ್ತಿ ಸ್ತ್ರೀ ಆಗಲಿ / ಪುರುಷನಾಗಲಿ ಹುಟ್ಟಿದಾಗಿನಿಂದ ಪ್ರತಿ ಗಂಟೆ, ಪ್ರತಿ ದಿನ, ಪ್ರತಿ ತಿಂಗಳು ಪವ್ರತಿವರ್ಷ ಆತನ ಗ್ರಹಗತಿಗಳ ಚಲನ-ವಲನ ಬದಲಾಗುತ್ತಿರುತ್ತದೆ. ಪೂರ್ವ ಜನ್ಮದ ಕರ್ಮ / ಧರ್ಮದ ಪ್ರಕಾರ ವ್ಯಕ್ತಿಯ ಭವಿಷ್ಯವಿರುತ್ತದೆ.

ಹುಟ್ಟಿದಾಗ ಯಾವ ಗ್ರಹಗತಿಗಳ ನೀಚ ಸ್ಥಾನವಿದೆ. ಗ್ರಹಗಳ ಅಧೀನ ದೇವತೆಗಳು ಯಾರು ಎರಡು ಎಂದು ತಿಳಿದುಕೊಂಡು ಮೊದಲೇ ಅದಕ್ಕೆ ಪರಿಹಾರ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ನೀವು ಹುಟ್ಟಿದಾಗ ಇದ್ದ ನೀಚ ಗ್ರಹದ ಪ್ರಭಾವ ನಾವು ಬೆಳೆದಂತೆಲ್ಲ ನಮ್ಮ ಜೊತೆ ಬೆಳೆಯುತ್ತ ಬಂದು ನಾನಾ ಸಮಸ್ಯೆಗಳನ್ನು ತಂದೊಡ್ಡುತ್ತದೆ.

ಉದಾ: ಶನಿ ನೀಚ. ಯಾವುದಾದರೂ ವ್ಯಕ್ತಿಗೆ ಈ ರೀತಿಯಿದ್ದಾಗ ಜೀವನದಲ್ಲಿ ನಾನಾ ಕಷ್ಟಗಳು ಕೂಡುವುದರ ಜೊತೆಗೆ ಯಾವಾಗ ಶನಿದೆಸೆ ಬರುತ್ತದೊ ಆಗ ಮೊದಲೇ ನೀಚ ಶನಿಯಿದ್ದ ವ್ಯಕ್ತಿ ಸಮಸ್ಯೆಗಳ ಸುಳಿಗೆ ಸಿಲುಕಿ ಶನಿದೆಸೆಯಲ್ಲಿ ಮರಣ ಕೂಡ ಸಂಭವಿಸುವ ಸಾಧ್ಯತೆಯಿರುತ್ತದೆ.

ಆದ್ದರಿಂದ ನಿಮ್ಮ ಜಾತಕದಲ್ಲಿ ಬಂದಿರುವ ಯಾವುದೇ ಗ್ರಹಗಳ ನೀಚ ಪ್ರಭಾವ ನಿಮ್ಮ ಮೇಲೆ ಆಗದಂತೆ ಎಚ್ಚರಿಕೆ ವಹಿಸಿ. ನೀವು ಹುಟ್ಟಿದಾಗಿನಿಂದ ಕೊನೆ ಸಾಯುವವರೆಗೂ ಒಂದಲ್ಲ ಒಂದು ಗ್ರಹ ನಿಮ್ಮನ್ನು ಪ್ರತಿ ತಿಂಗಳು ಪ್ರತಿವರ್ಷ ಹಿಂಬಾಲಿಸುತ್ತಿರುತ್ತದೆ. ನೀವು ಮೊದಲಿನಿಂದಲೂ ನಯ ವಿನಯ ಗೌರವ ಪೂಜೆ ಪರಿಹಾರ ದಾನ ಧರ್ಮ ಆಧ್ಯಾತ್ಮಿಕ ಜೀವನದಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಂಡಿದ್ದರೆ, ಯಾವುದೇ ವರ್ಷ ಬರುವ ಗಂಡಾಂತರ ಕೊಡುವ ಗ್ರಹಗಳು ನಿಮ್ಮನ್ನು ಏನು ಮಾಡುವುದಿಲ್ಲ. ಆದರೆ ಮೋಸ, ವಂಚನೆ, ಢಗಾ, ಸುಳ್ಳು, ಇನ್ನೊಬ್ಬರನ್ನು ಹಿಂಸಿಸುವುದು, ವಂಚಿಸುವುದು. ತಂದೆ-ತಾಯಿಗಳಿಗೆ ಹೆಂಡತಿ ಗಂಡನಿಗೆ, ಮಕ್ಕಳಿಗೆ, ಗುರುಹಿರಿಯರಿಗೆ ದ್ರೋಹ ಮಾಡಿ ಪಾಪಕರ್ಮಗಳನ್ನು ಏನಾದರೂ ಮಾಡಿದ್ದರೆ ಅಥವಾ ಮಾಡುತ್ತಿದ್ದರೆ ಈ ದೆಸೆಗಳ ಲೆಕ್ಕಾಚಾರದಲ್ಲಿ ನಿಮ್ಮನ್ನು ಹಿಂಬಾಲಿಸುವ ಗ್ರಹಗಲ ಪ್ರಭಾವ ನೀಚವಾಗಿದ್ದಾಗ ನಿಮಗೆ ಘನಘೋರ ಶಿಕ್ಷೆಯನ್ನು ನೀಡಿ ಹೋಗುತ್ತದೆ. ಇಡೀ ನವಗ್ರಹಗಳಲ್ಲಿ ಸೂರ್ಯನಿಂದ ಹಿಡಿದು ಶನಿ, ಮಂಗಳನವರೆಗೂ ಅದರದೇ ಆಯಾ ಪ್ರಭಾವ ಇರುತ್ತದೆ. ಇದು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತಿರುತ್ತದೆ.

ಜನವರಿ 14  ಮಾಚರ್್ 23  ಜುಲೈ 7  ನವೆಂಬರ್ 17  ಪ್ರತಿ ವರ್ಷದಲ್ಲಿ ಈ ತಿಂಗಳುಗಳಲ್ಲಿ ಪ್ರತಿ ವ್ಯಕ್ತಿಗೆ ಭವಿಷ್ಯ ಬದಲಾಗುತ್ತಿರುತ್ತದೆ. ಕೆಲವರಿಗೆ ಒಳ್ಳೆಯದಾದರೆ ಕೆಲವರಿಗೆ ಕೆಟ್ಟದಾಗುತ್ತದೆ. ಕೆಲವರಿಗೆ ಮಕ್ಕಳಾದರೆ ಕೆಲವರಿಗೆ ಮಕ್ಕಳು ಸಾಯುತ್ತಾರೆ. ಕೆಲವರಿಗೆ ನಷ್ಟವಾದರೆ ಕೆಲವರಿಗೆ ಲಾಭ ಹೀಗೆ ಈ ಗ್ರಹಗಳ ಪ್ರಭಾವಕ್ಕೆ ಸಿಲುಕದವರಿಲ್ಲ.

ಆದ್ದರಿಂದ ಪ್ರತಿ 6 ತಿಂಗಳಗೊಮ್ಮೆ ನಿಮ್ಮ ಜಾತಕವನ್ನು ಪರಿಶೀಲಿಸಿಕೊಂಡು ಹೋಗಬೇಕು ಇದರಿಂದ ಮುಂದೆ ಬರುವ ಅನುಭವಿಸುವ ಸಮಸ್ಯೆಗಳಿಗೆ ಮುಂಚಿತವಾಗಿ ಪರಿಹಾರ ಕಂಡುಕೊಳ್ಳಬೇಕು.

ಒಬ್ಬ ವ್ಯಕ್ತಿಗೆ ಒಂದು ಗ್ರಹದಿಂದ ಹಿಡಿದು 6 ಗ್ರಹಗಳವರೆಗೂ ಪ್ರಭಾವವಿರುತ್ತದೆ. ಇದು ಹುಟ್ಟಿದಾಗ ಬರುವ ಗ್ರಹಗಳು ಹಾಗೇ ಒಬ್ಬ ವ್ಯಕ್ತಿಗೆ ಇಡೀ 9 ನವಗ್ರಹಗಳು ಹುಟ್ಟಿದಾಗನಿಂದ ಕೊನೆ ಸಾಯುವವರೆಗು ಪ್ರತಿ ವರ್ಷ ಬಂದು ಹೋಗುತ್ತಿರುತ್ತದೆ. ಇದರಲ್ಲಿ ಒಳ್ಳೆದು ಯಾವುದು ಕೆಟ್ಟದು ಯಾವುದು ಎಂದು ತಿಳಿದು ಕೊಳ್ಳಬೇಕು.

ಈಗ ಮುಖ್ಯ ವಿಷಯಕ್ಕೆ ಬರೋಣಾ.

ಇಲ್ಲಿಯವರೆಗೂ ದೆಸೆಗಳಲ್ಲಿನ ಗ್ರಹಗತಿಗಳ ಬಗ್ಗೆ ತಿಳಿದಾಯ್ತು ಇನ್ನು ಮುಖ್ಯವಾಗಿ ನೀವು ಹುಟ್ಟಿದಾಗ ಯಾವ ಗ್ರಹದಲ್ಲಿ ಹುಟ್ಟಿದ್ದೀರಿ. ಆ ಗ್ರಹ ಯಾವುದು ಆ ಗ್ರಹಕ್ಕೆ ಸಂಬಂಧಪಟ್ಟ ಅಧೀನ ದೇವರು ಯಾರು ಎಂದು ತಿಳಿದುಕೊಳ್ಳಬೇಕು. ಆ ದೇವರನ್ನು ತಿಳಿದ ನಂತರ ಅದೇ ದೇವರನ್ನು ಹುಟ್ಟಿದಾಗಿನಿಂದ ಅಥವಾ ಬುದ್ಧಿ ಬಂದಾಗಿನಿಂದ ಸಾಯುವವರೆಗೂ ಭಯ ಭಕ್ತಿಯಿಂದ ಶ್ರದ್ಧೆಯಿಂದ ನಂಬಿಕೆಯಿಂದ ಪೂಜಿಸುತ್ತಾ ಹೋಗಬೇಕು.

ಇದನ್ನು ತಿಳಿಯದೆ ಸಿಕ್ಕ ಸಿಕ್ಕ ದೇವರುಗಳನ್ನು ಪೂಜಿಸುವುದು ಫಲ ದೊರೆಯದಿದ್ದಾಗ ದೇವರೆ ಇಲ್ಲ ಎನ್ನುವದು ಈ ರೀತಿ ನಡೆದುಕೊಳ್ಳಬಾರದು.

ನಿಮಗೆ ನಿಮ್ಮ ಜಾತಕಕ್ಕೆ ಹೊಂದುವಂತೆ ದೇವರನ್ನು ನೀವು ಕೊನೆಯವರೆಗೂ ಪೂಜಿಸುತ್ತಾ ಹೋಗುವುದು ನಿಮ್ಮ ಭವಿಷ್ಯಕ್ಕೆ ಅತ್ಯುತ್ತಮ ಮುಖ್ಯ ಪರಿಹಾರ.

Menu

Go to top