ಈ ಭೂಮಿಯ ಮೇಲೆ ಜನಿಸುವ ಪ್ರತಿಯೊಬ್ಬ ಮಾನವ ಜೀವಿ ತಾನು ಎಲ್ಲರಿಗಿಂತ ಅತ್ಯಂತ ಸುಖಿಯಾಗಿರಬೇಕು, ಕಷ್ಟಗಳೇ ಇರಬಾರದು, ಜಗತ್ತಿನ ಎಲ್ಲಾ ಸುಖ ಬೋಗಗಳನ್ನು ಅನುಭವಿಸಬೇಕೆ. ಹಾಗೆ ಹೀಗೆ ಎಂದು ಅಂದು ಕೊಳ್ಳುತ್ತಾನೆ. ಆದರೆ ಹಿಂದಿನ ಜನ್ಮದ ಪಾಪ ಕರ್ಮಗಳು ಬಿಡಬೇಕಲ್ಲ.

ಜಗತ್ತಿನ ಎಲ್ಲಾ ಜೀವರಾಶಿಗಳನ್ನು ತನ್ನ ನಿಯಂತ್ರಣದಲ್ಲಿಟ್ಟುಕೊಂಡಿರುವ ಸೃಷ್ಟಿಯ ನವಗ್ರಹಗಳು ಮಾನವನನ್ನು ನಾನಾ ವಿಧವಾಗಿ ಕಾಡಿ ಆಯಾಯಾ ವ್ಯಕ್ತಿಯ ಕಮರ್ಾನುಸಾರ ಸಮಸ್ಯೆಗಳನ್ನು ತಂದೊಡ್ಡುತ್ತದೆ. ಈ ಸಮಸ್ಯೆಗಳು ನಾನಾ ಬಗೆಯದಾಗಿರುತ್ತದೆ. ರೋಗರುಜಿನ, ವಿದ್ಯಾಭ್ಯಾಸ ಕಡಿತ, ವ್ಯಾಪಾರ ನಷ್ಟ, ಮದುವೆ ಸಮಸ್ಯೆ ಸಂತಾನ ಹೀನತೆ ಧನನಷ್ಟ ಸಾಲ ನೆಮ್ಮದಿ ಹಾಳು ಇದಕ್ಕೆ ಪರಹಾರವೇನು?

ಪ್ರಾಚೀನ ಕಾಲದಿಂದ ರಾಜ ಮಹಾರಾಜರುಗಳು ತಮ್ಮಲ್ಲಿ ಅಪೂರ್ವ ವಾದ ರತ್ನಗಳನ್ನು ಸಂಗ್ರಹಿಸಿ ಇಟ್ಟುಕೊಳ್ಳುತ್ತಿದ್ದರು. ಇವರುಗಳು ಧರಿಸುತ್ತಿದ್ದ ಕಿರೀಟಗಳು, ಆಭರಣಗಳು, ಹಾರಗಳು, ಸಿಂಹಾಸನಗಳು ಮೈ ಮೇಲಿನ ವಸ್ತ್ರಗಳಲ್ಲಿ ಎಲ್ಲಾ ಕಡೆಗಳಲ್ಲಿ ರತ್ನಗಳಿಂದ ಅಲಂಕರಿಸಿ ಕೊಳ್ಳುತ್ತಿದ್ದರು. ಹಾಗೆಯೇ ಇಂದು ಪ್ರಸಿದ್ಧ ದೇವರುಗಳಿಗೆ ರತ್ನ ಖಚಿತ ಕಿರೀಟ ಮತ್ತು ಅತ್ಯಮೂಲ್ಯ ಬೆಲೆಬಾಳುವ ಅಪರೂಪದ ರತ್ನಗಳನ್ನು ಅಲಂಕಾರಕ್ಕಾಗಿ ತೋಡಿಸುವುದನ್ನು ನೋಡಿದ್ದೇವೆ. ವೇದ ಉಪನಿಷತ್ತು, ಪುರಾಣ, ಭಾಗವತ ಹೀಗೆ ಪ್ರಾಚೀನ ಗ್ರಂಥಗಳಲ್ಲಿ ರತ್ನಗಳ ಉಲ್ಲೇಖವಿದೆ.

ಭೂಗರ್ಭದಲ್ಲಿ ರೊರೆಯುವ ಮಾಣಿಕ್ಯ, ಪುಷ್ಯರಾಗ, ಗೋಮೇದಿಕಾ, ನೀಲ, ಕ್ಯಾಟ್ಸ್ ಐ, ವಜ್ರ, ಪಚ್ಚೆ ಹಾಗೆ ಸಮುದ್ರ ಗರ್ಭದಲ್ಲಿ ದೊರೆಯುವ ಮುತ್ತು, ಹವಳ ರತ್ನಗಳಿಂದ ಹೊರಡುವ ಕಂಪನ ತಮ್ಮದೇ ಆದ ತರಂಗಾತರಂಗಗಳನ್ನು ಹೊಂದಿರುತ್ತವೆ. ಇವುಗಳನ್ನು ಮನುಷ್ಯನು ತನ್ನ ಶರೀರಕ್ಕೆ ಧರಿಸಿದಾಗ ರತ್ನಗಳಿಂದ ಹೊಮ್ಮುವ ಕಿರಣಗಳು ಚರ್ಮ - ರಂಧ್ರಗಳ ಮೂಲಕ ರಕ್ತವನ್ನು ಸೇರಿ ಮೈ ಮನಸ್ಸುಗಳನ್ನು ಪ್ರಚೋದಿಸುತ್ತದೆ. ನಮ್ಮ ಶರೀರ ಕಂಪನ ತರಂಗಾತರಂಗಳಿಗೆ ಹೊಂದಿಕೊಳ್ಳುವ ರತ್ನಗಳನ್ನು ಧರಿಸಿದರೆ ಸರಿಯಾದ ದಿಕ್ಕಿನಲ್ಲಿ ಯೋಚಿಸುವ ಮತ್ತು ಕೆಲಸ ಮಾಡುವ ಬುದ್ಧಿ ಜಾಗೃತಗೊಳ್ಳುತ್ತದೆ.

ತೋರು ಬೆರಳು ಗುರುವಿನದು

ಮಧ್ಯದ ಬೆರಳು ಶನಿಯದು

ಉಂಗುರು ಬೆರಳು ಸೂರ್ಯನದು

ಕಿರು ಬೆರಳು ಬುಧನದು - ಇನ್ನು ಶುಕ್ರ, ರಾಹು, ಕೇತು, ಚಂದ್ರ, ಕುಜ ಹಸ್ತದಲ್ಲಿದ್ದಾರೆ.

ಕೈ ಬೆರಳುಗಳಿಗೆ ಆಯಾಗ್ರಹಗಳಿಗೆ ಸಂಬಂಧಿಸಿದ ಕಾಸ್ಮಿಕ್ ಸ್ಪಂದನವಿದೆ. ಈ ಸ್ಪಂದನಗಳಿಗೆ ರತ್ನಗಳನ್ನು ಧರಿಸಿದಾಗ ವ್ಯಕ್ತಿಯಲ್ಲಿ ಇರುವ ಅದೃಷ್ಟ ಜಾಗೃತಗೊಳ್ಳುತ್ತದೆ.

Menu

Go to top