ಆಯಾ ವ್ಯಕ್ತಿಯ ಜನ್ಮ ಆಧರಿಸಿ ಸ್ತ್ರೀ ವ್ಯಕ್ತಿಯಾಗಲೀ/ ಪುರುಷ ವ್ಯಕ್ತಿಯಾಗಲಿ ಹುಟ್ಟಿದಾಗಿನಿಂದ ಝಣ ಝಣ ಕಾಂಚಣ ಎಣಿಸುವ ವ್ಯಕ್ತಿಗಳಾಗಿರುತ್ತಾರೆ. ಹಾಗೆ ಕೆಲ ಸ್ತ್ರೀ ಪುರುಷರಲ್ಲಿ ಎಷ್ಟೆ ಸಂಪಾದನೆ ಮಾಡಿದರೂ ಕೈಯಲ್ಲಾಗಲಿ / ಮನೆಯಲ್ಲಾಗಲಿ ಅಥವಾ ಬ್ಯಾಂಕಿನಲ್ಲಾಗಲಿ ಒಂದು ರೂಪಾಯಿಯನ್ನು ಹಿಡಿದಿಡಲು ಸಾಧ್ಯವಿಲ್ಲ ಕಾರಣ ಗೊತ್ತೆ?

ಆಯಾ ವ್ಯಕ್ತಿಯ ಗ್ರಹಗತಿಗಳ ಪ್ರಭಾವ ಇದು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತಿರುತ್ತದೆ. ಮನುಷ್ಯ ಕೋಟಿಯನ್ನು ನಿಯಂತ್ರಿಸುವ ನವಗ್ರಹಗಳಲ್ಲಿ ಆಯಾ ವ್ಯಕ್ತಿಯ ಪುಣ್ಯ / ಪಾಪವನ್ನು ಆದರಿಸಿ ಹಣ ಅಧಿಕಾರವನ್ನು ನೀಡುತ್ತದೆ. 

ಯಾವ ವ್ಯಕ್ತಿ ಯಾವ ಗ್ರಹದ ನಿಯಂತ್ರಣದಲ್ಲಿ ಹುಟ್ಟಿದ್ದಾನೆ. ಆ ಗ್ರಹದ ಹಣದ ಪ್ರಭಾವ ಎಷ್ಟಿದೆ ಎನ್ನುವುದನ್ನು ತಿಳಿದುಕೊಳ್ಳಬೇಕು. ಎಲ್ಲ 9 ಗ್ರಹಗಳು ಹಣವನ್ನು ನೀಡುತ್ತವೆ ಮತ್ತು ಕಿತ್ತು ಕೊಳ್ಳುತ್ತವೆ ಅಥವಾ ಕೊಡುವುದೇ ಇಲ್ಲ ಕೊಟ್ಟರೂ ಇರಲು ಬಿಡುವುದಿಲ್ಲ. ಇಂತಹ ಸಂದರ್ಭದಲ್ಲಿ ನಮ್ಮ ಯಾವುದೇ ಹಣ ಅಂತಸ್ತು ಸುರಕ್ಷಿತವಾಗಿರಬೇಕಾದರೇ ನಿಮ್ಮ ಅದೃಷ್ಟ / ದುರಾದೃಷ್ಟ ಏನೇ ಇರಲಿ ನಿಮ್ಮ ಜನ್ಮ ಜಾತಕ ಆದರಿಸಿ ನಿಮ್ಮ ಅದೃಷ್ಟದ ಸಂಖ್ಯೆ ಯಾವುದು ಎಂದು ತಿಳಿದು ಕೊಳ್ಳಬೇಕು.

ಇಡೀ ನವಗ್ರಹಗಳಲ್ಲಿ ಬುಧ ಮತ್ತು ಶುಕ್ರ ಹೆಚ್ಚು ಹಣಕಾಸಿನ ಗ್ರಹಗಳು. ನಿಮ್ಮ ಜಾತಕ ಅಥವಾ ಜನ್ಮ ಸಂಖ್ಯೆಯಲ್ಲಿ ಯಾವುದು ಅತ್ಯಂತ ಅದೃಷ್ಟ ಕೊಡುವ ಗ್ರಹ ಆ ಗ್ರಹದ ಸಂಖ್ಯೆ ಯಾವುದೋ ಎಂದು ತಿಳಿದುಕೊಂಡು ಆ ಸಂಖ್ಯೆ ಬರುವ ರೀತಿ ನೀವು ಯಾವುದೇ ಹೆಸರಿನ ಬ್ಯಾಂಕಿನಲ್ಲಿ ಖಾತೆ ತೆರೆಯಬಹುದು.

ಎಷ್ಟೋ ಜನ ಬ್ಯಾಂಕಿನಲ್ಲಿ ಹಾಕಿದ ಹಣ ಇರುವುದೇ ಇಲ್ಲ ಎಂದು ಬಹಳ ಪೇಚಾಡಿಕೊಳ್ಳುತ್ತಾರೆ. ಕೆಲವರು ಬಹಳ ಖುಷಿಪಡುತ್ತಾರೆ. ತಾವು ತೆರೆದಿರುವ ಅಕೌಂಟ್ನಲ್ಲಿ ದಿನೇ ದಿನೇ ಹಣ ವೃದ್ಧಿಯಾಗುತ್ತಿರುವುದು ನೋಡಿ ಏನೂ ಖಾಲಿಯಾಗುವುದೇಇಲ್ಲ ಎಂದು, ಈ ರೀತಿಯ ಏರಿಳಿತಗಳಿಗೆ ನಿಮ್ಮ ಅದೃಷ್ಟ / ದುರಾದೃಷ್ಟ ಸಂಖ್ಯೆಗಳೇ ಕಾರಣ. ನಿಮ್ಮ ಅದೃಷ್ಟ ಸಂಖ್ಯೆಯಲ್ಲಿಲ್ಲದಿದ್ದರೆ ಖಾತೆಯಲ್ಲಿ ಎಷ್ಟೇ ಹಣ ಹಾಕಿದರೂ ಉಳಿಯುವುದಿಲ್ಲ. ಇದರಿಂದ ಸಾಲ ತೊಂದರೆಗಳು ಹೆಚ್ಚಾಗುತ್ತವೆ. ಬರುವ ಅಲ್ಪ ಸ್ವಲ್ಪ ಹಣ ಎಲ್ಲಿ ಹೋಗುತ್ತಿದೆ ಎಂದರೆ ತಿಳಿಯುವುದಿಲ್ಲ. ಅದೇ ನಿಮ್ಮ ಅದೃಷ್ಟ ಸಂಖ್ಯೆಯಲ್ಲಿ ನಿಮ್ಮ ಖಾತೆ ಸಂಖ್ಯೆಯಿದ್ದರೆ, ಅಲ್ಪ ಹಣ ಎಲ್ಲಿ ಹೋಗುತ್ತಿದೆಯೆಂದು ತಿಳಿಯುವುದಿಲ್ಲ. ಅದೇ ನಿಮ್ಮ ಅದೃಷ್ಟ ಸಂಖ್ಯೆಯಲ್ಲಿ ನಿಮ್ಮ ಖಾತೆ ಸಂಖ್ಯೆಯಿದ್ದರೆ, ಅಲ್ಪ ಹಣವು ದ್ವಿಗುಣವಾಗುತ್ತದೆ. ಆದ್ದರಿಂದ ನಿಮ್ಮ ಬ್ಯಾಂಕ್ ಖಾತೆಯನ್ನು ಪ್ರಾರಂಭ ಮಾಡುವ ಮೊದಲು ನಿಮ್ಮ  ಹಣಕಾಸಿನ ಅದೃಷ್ಟ ಗ್ರಹ ಯಾವುದು ಎಂದು ತಿಳಿದುಕೊಂಡು ಬ್ಯಾಂಕ್ ಖಾತೆಗಳನ್ನು ಪ್ರಾರಂಭ ಮಾಡಿ.

Menu

Go to top