ನಿಮ್ಮ ನಿತ್ಯ ಜೀವನದಲ್ಲಿ ಉಪಯೋಗಿಸುವ ವಾಹನದ ಪಾತ್ರ ಅತ್ಯಂತ ಮಹತ್ವದ್ದು. ವ್ಯಕ್ತಿಗೊಂದು ವಾಹನವಿಲ್ಲದಿದ್ದರೆ, ಬದುಕೇ ದುಸ್ತರ ಎನ್ನವಂಥ ಸ್ಥಿತಿ, ಸ್ವಂತಕ್ಕೂ ಇಲ್ಲ ಬಾಡಿಗೆಗೋ ವಾಹನವನ್ನು ತೆಗೆದುಕೊಂಡು ಉಪಯೋಗಿಸುವವರಿದ್ದಾರೆ.

ಸಂಖ್ಯೆಗಳ ಮುಖಾಂತರ ಯಾವುದೇ ಅಪಘಾತವಿಲ್ಲದೇ ರಿಪೇರಿಯಿಲ್ಲದೇ ನಷ್ಟವಿಲ್ಲದೆ ವಾಹನಗಳಿಂದ ಅದೃಷ್ಟ ಪಡೆಯುವುದು ನಿಮ್ಮ ಕೈಯಲ್ಲಿದೆ. ನಿಮ್ಮ ಗ್ರಹಗತಿಗಳ ಏರುಪೇರು ಇದ್ದಾಗಲೂ ಜಾತಕರೀತ್ಯಾ ಅಪಘಾತವಿದ್ದರೂ ನಿಮ್ಮ ಅದೃಷ್ಟ ಸಂಖ್ಯೆಯಲ್ಲಿರುವ ವಾಹನದಿಂದ ಅಪಘಾತವಾಗುವುದೇ ಇಲ್ಲ. ಅತೀ ಕ್ಲಿಷ್ಟ ಸಂದರ್ಭಗಳಲ್ಲಿ ವಾಹನಕ್ಕೂ ಜಖಂ ಆಗಿ ನೀವು ಸುರಕ್ಷಿತವಾಗಿ ಉಳಿಯುವಿರಿ. ನಾವು ಬಳಸುವ ಕೆಲವೊಂದು ವಾಹನಗಳು ಬದುಕಿನಲ್ಲಿ ಪ್ರವೇಶ ಪಡೆದಾಗ ಬಹಳಷ್ಟು ಒಳ್ಳೆಯದು ನಡೆದಿದೆ. ಹಾಗೆಯೇ ಕೆಟ್ಟದು ನಡೆದಿದೆ. ಜಾತಕದಲ್ಲಿ ನೀವು ಖರೀದಿಸುವಾಗ ಸಮಯ ಒಳ್ಳೆಯದಿದ್ದರೆ, ಒಳ್ಳೆಯ ಅದೃಷ್ಟದ ವಾಹನ ಸಂಖ್ಯೆ ತಾನಾಗೀಯೇ ಬರುತ್ತದೆ. ಅದೇ ದುರಾದೃಷ್ಟ ಸಮಯ ಅಪಘಾತವಿದ್ದರೆ ತಾನೇ ತಾನಾಗಿ ದುರಾದೃಷ್ಟ ಸಂಖ್ಯೆಯ ವಾಹನ ನಿಮ್ಮದಾಗುತ್ತದೆ. ಆದ್ದರಿಂದ ಬಹಳ ಎಚ್ಚರಿಕೆ. ನಿಮ್ಮ ಜಾತಕಕ್ಕೇ ಅದೃಷ್ಟ ಸಂಖ್ಯೆಯಲ್ಲಿರುವ ವಾಹನ ಖರೀದಿ ಮಾಡಿ ಯಾವುದೇ ವಾಹನದ ಸಂಖ್ಯೆಯನ್ನು ಈ ರೀತಿ ಕೊಡಬೇಕು.

ಉದಾ: ಕೆ.ಎ-05  ಎಂ.ಇ-6756

2+1+5+4+5+6+7+5+6+ = 42 = 6

ಕೆ.ಎ-01 ಡಿ-5766

2+1+1+4+5+6+6+ = 32 = 5

Menu

Go to top