ಪ್ರತಿಯೊಬ್ಬ ಮಾನವ ಜೀವಿಯ ಪುಣ್ಯಾನುಸಾರ ಕಮರ್ನುಸಾರ ಸ್ತ್ರೀ ಅಥವಾ ಪುರುಷರಲ್ಲಿ ಆಕರ್ಷಣೆ ಎನ್ನುವುದು ಕೆಲವರಲ್ಲಿ ಹುಟ್ಟಿದಾಗಿನಿಂದ ಬಂದರೆ ಕೆಲವರಿಗೆ ಬರುವುದಿಲ್ಲ. ಕೆಲವರಲ್ಲಿ ದೇಹ ಸೌಂದರ್ಯ, ವ್ಯಕ್ತಿತ್ವ, ಎಲ್ಲರನ್ನು ಆಕರ್ಷಣೆಗೆ ಒಳ ಪಡಿಸಿದರೆ ಕೆಲವರಲ್ಲಿ ಎಷ್ಟೆ ಪ್ರಯತ್ನ ಪಟ್ಟರೋ ತಮ್ಮನ್ನು ತಾವು ಗುರುತಿಸಿಕೊಳ್ಳಲು ಸಾಧ್ಯವಾಗುವುದೇ ಇಲ್ಲ. ಏಕೆ ನಿಮಗೆ ಈ ರೀತಿ ಎಂಬ ಉತ್ತರ ಹುಡುಕಲು ಹೊರಟಾಗ ಎಲ್ಲರ ದೇಹದಲ್ಲಿ ಪ್ರಮುಖವಾಗಿ ಹೊರ ಹೊಮ್ಮುವ ಒಂದು ಬಗ್ಗೆ ದೇಹ ಸುಗಂಧ ಎಲ್ಲರನ್ನು ಆಕಷರ್ಿಸಲು ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ ಎಂದು ತಿಳಿದು ಬರುತ್ತದೆ. ಇದರಲ್ಲಿ ಕೂಡ ಉತ್ತಮ ಅತ್ಯುತ್ತಮ, ಮಧ್ಯಮ ಸುಗಂಧ ಎಂದು ಅತಿ ವಾಕರಿಕೆ ಬರುವ ಕೆಟ್ಟ ಸುಗಂಧವೆಂಬ ವಾಸನೆಗಳು ಮನುಷ್ಯನ ದೇಹದಲ್ಲಿದೆ.

ಕೆಲವು ಸ್ತ್ರೀ ಅಥವಾ ಪುರುಷರಲ್ಲಿ ಅತಿಯಾದ ಕೆಟ್ಟ ವಾಸನೆ ದೇಹದಿಂದ ಹೊರ ಹೊಮ್ಮತ್ತಿದ್ದು ಇಂಥ ವ್ಯಕ್ತಿಗಳನ್ನು 5 ನಿಮಿಷ ಕೂಡ ಹತ್ತಿರದಿಂದ ನಿಂತು ಅಥವಾ ಕೂತು ಮಾತಾನಾಡಿಸುವುದಕ್ಕೆ ಆಗುವುದಿಲ್ಲ. ಎಷ್ಟು ಹೊತ್ತಿಗೆ ಇವಳು / ಅವನು ಇಲ್ಲಿಂದ ಹೊರಡುತ್ತಾರಪ್ಪ ಎಂದು ಅಂದು ಕೊಳ್ಳೂತ್ತೇವೆ. ಹಾಗೆ ಯಾವುದಾದರೂ ಗಲೀಜು ಸ್ಥಳಗಳಿಗೆ ಸ್ಥಳಗಳಿಗೆ ಹೋದಾಗ ಗಲೀಜು ಮನೆಗಳಿಗೆ ಹೋದಾಗ ಕೆಲವು ಸ್ಲಂ ಮನೆಗಳಿಗೆ ಹೋದಾಗ ಮೂಗನ್ನು ಮುಚ್ಚಿಕೊಂಡು ಇಲ್ಲಿಂದ ಎಷ್ಟು ಬೇಗ ಹೊರಡುತ್ತೇವೆ ಎಂದು ಮೂಗನ್ನು ಮುಚ್ಚಿಕೊಂಡು ಓಡುತ್ತೇವೆ.

ಹಾಗೆ ಒಂದು ಒಳ್ಳೆಯ ದೇವಸ್ಥಾನದ ಒಳಹೊಕ್ಕಾಗ ನಮ್ಮ ಮನಸ್ಸು ಮೊದಲು ಸೋಲುವುದು. ದೇವಸ್ಥಾನದ ಬಳಿ ಇರುವ ಸುಗಂಧಮಯ ಪರಿಮಳದ ವಾತಾವರಣದಿಂದ. ದೇವಸ್ಥಾನದದ ಒಳ ಮತ್ತು ಹೊರಗೆ ನಾನಾ ಬಗೆಯ ಹೂವುಗಳಿಂದ ಸುಗಂಧ ದ್ರವ್ಯಗಳಿಂದ ಅಗರ ಬತ್ತಿಗಳ ಪರಿಮಳದಿಂದ ನಮ್ಮಲ್ಲಿ ತಾನೇ ತಾನಾಗಿ ಭಕ್ತಿ ಹುಟ್ಟುತ್ತದೆ. ನೋಡಿ, ಭಗವಂತನೂ ಪ್ರಿಯವಾದ ಈ ಸುಗಂಧ ಪರಿಮಳದ ಮಹತ್ವ ಎಷ್ಟಿದೆ ಎಂದು ದುಃಖ-ಕಷ್ಟ ಗೊಂದಲ ಮಾನಸಿಕ ವ್ಯಥೆಯಿಂದ ಅಲ್ಲೋಲ ಕಲ್ಲೋಲವಾಗಿರುವ ಮನಸ್ಸು ಈ ಸುಗಂಧ ಪರಿಮಳದಿಂದ ಖುಷಿಯಾಗಿ ಅರಳಿ ಸಂತೋಷವಾಗಿ ನಮ್ಮ ಎಲ್ಲ ರೀತಿಯ ನೋವುಗಳನ್ನು ಮರೆತು ಹೊರ ಬರುತ್ತಿದೆ. ಇಲ್ಲ ಒಂದು ವಿಷಯ ಗಮನಿಸಿ. ಸುಗಂಧ ಪರಿಮಳ ಅನ್ನುವುದೊಂದು ಪಾಸಿಟೀವ್ ಎನಜರ್ಿ. ಕೆಟ್ಟ ಪರಿಮಳ ಎನ್ನುವುದು ನೆಗೆಟಿವ್ ಎನಜರ್ಿ. ಪ್ರತಿ ವ್ಯಕ್ತಿಗಳಲ್ಲಿ ಈ ಎರಡು ಶಕ್ತಿಗಳು ಇರುತ್ತವೆ. ತನ್ನ ದೇಹದಲ್ಲಿ ಕೆಟ್ಟ ಸುಗಂಧವನ್ನು ಹೊಂದಿರುವ ವ್ಯಕ್ತಿ ಎಲ್ಲೋ ಆಕಷರ್ಿತನಾಗಲಾರ ಅಸಹ್ಯದಿಂದ ತಿರಸ್ಕರಿಸಲ್ಪಡುತ್ತಾನೆ. ಇವನ / ಇವಳ ಜೊತೆ ಯಾರೂ ಮುಖ ನೋಡುವುದಕ್ಕೆ ಇಷ್ಟ ಪಡುವುದಿಲ್ಲ. ಸೇರುವುದಕ್ಕೂ ಇಷ್ಟಪಡುವುದಿಲ್ಲ. ಎಲ್ಲೂ ಯಾವುದೇ ಕೆಲಸ ಕಾರ್ಯಗಳಲ್ಲಿ ಇಂತಹ ವ್ಯಕ್ತಿಗಳಿಗೆ ಯಶಸ್ಸು ಸಿಗುವುದಿಲ್ಲ. ಸಮಾಜದಿಂದಲೇ ತಿರಸ್ಕರಿಸಲ್ಪಡುತ್ತಾನೆ.

ಯಾವುದೇ ಕಛೇರಿ ಫ್ಯಾಕ್ಟರಿ ಸಾರ್ವಜನಿಕ ಸ್ಥಳ ಮುಖ್ಯ ವ್ಯಕ್ತಿಗಳನ್ನು ಬೇಟಿ ಮಾಡುವಾಗ, ವ್ಯವಹಾರ ಮಾಡುವಾಗ, ವ್ಯಾಪಾರ ಮಾಡುವಾಗ ಧನಾತ್ಮಕ ಶಕ್ತಿಗಾಗಿ ಆಕರ್ಷಣೆಗಾಗಿ ಪ್ರತಿದಿನ ಮನೆಯಿಂದ ಹೊರ ಹೋಗುವಾಗ ನಿಮ್ಮ ಅದೃಷ್ಟ ಬಣ್ಣಗಳ ಜೊತೆ ನಿಮ್ಮ ಅದೃಷ್ಟ ಸುಗಂಧ ದ್ರವ್ಯಗಳನ್ನು ತಪ್ಪದೇ ಬಳಸಿ ವ್ಯಾಪಾರ - ವ್ಯವಹಾರ ಸಂಪರ್ಕಗಳಲ್ಲಿ ಅತ್ಯುತ್ತಮ ಬದಲಾವಣೆ ಗಮನಿಸಿ. ಅದೃಷ್ಟ ತಾನೇ ತಾನಾಗಿ ಒದಗಿ ಬರುತ್ತದೆ.

ಕೆಲವು ವ್ಯಕ್ತಿಗಳನ್ನು ಸ್ತ್ರೀಯಾಗಲೀ / ಪುರುಷರಾಗಲಿ ಇವರ ವ್ಯಕ್ತಿತ್ವ ದೇಹ ಸೌಂಧರ್ಯ ಅಥವಾ ಅವರ ದೇಹದ ಸುಗಂಧ ಪರಿಮಳದಿಂದ ಮತ್ತೆ ಮಾತನ್ನಾಡಿಸಬೇಕೆನಿಸುತ್ತದೆ. ನೋಡಬೇಕೆನಿಸುತ್ತದೆ. ಇನ್ನು ಸ್ವಲ್ಪ ಹೊತ್ತು ನಮ್ಮ ಹತ್ತಿರವೇ ಇರಬಾರದೆ ಎನಿಸುತ್ತದೆ. ಇದು ಆಯಾ ವ್ಯಕ್ತಿಯಲ್ಲಿನ ಆಕರ್ಷಣಾ ಶಕ್ತಿ ನಮ್ಮನ್ನು ಮಂತ್ರ ಮುಗ್ದರನ್ನಾಗಿಸುತ್ತದೆ.

ಕೆಲವು ಪ್ರತಿಷ್ಠಿತ ಸಂಸ್ಥೆಗಳಲ್ಲಿ ಕಛೇರಿಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಬರೀ ಸುಗಂಧದಿಂದಲೋ ಎಲ್ಲರನ್ನು ಆಕಷರ್ಿಸುವ ಮತ್ತೆ ಮತ್ತೆ ಯಾರಪ್ಪ ಇವಳು / ಇವನು ಒಳ್ಳೆ ಸೆಂಟ್ ಹಾಕ್ಕೊಂಡು ಬಂದಿದ್ದಾನೆ ಎಂದು ಅಂದು ಕೊಳ್ಳುತ್ತೇವೆ.

ವ್ಯಕ್ತಿಯ ದೇಹದಿಂದ ಸದಾ ಹೊರ ಬರುತ್ತಲೆ ಇರುವ ಬೆಳಕಿನ ಪ್ರಭೆಯನ್ನು (ಂಗಖಂ) ಕೂಡ ಇಂದು ಕೆಲವು ವೈಜ್ಞಾನಿಕ ಉಪಕರಣಗಳು ದೃಢಪಡಿಸಿವೆ. ಇದನ್ನು ತೇಜಸ್ಸು / ವರ್ಚಸ್ಸು ಎಂದು ಕರೆಯುತ್ತೇವೆ.

ಇದೆಲ್ಲ ವ್ಯಕ್ತಿಯ ಜನ್ಮದಿನಾಂಕದಲ್ಲಿನ 9 ಗ್ರಹಗಳ ಪ್ರಭಾವವನ್ನು ಆಧರಿಸಿ ಕರ್ಮ / ಧರ್ಮ / ಪಾಪ ಪುಣ್ಯ ಎಷ್ಟರ ಮುಟ್ಟಿಗೆ ಇದೆ ಎಂದು ನಿರ್ಧರಿಸಿ ಹೇಳಬೇಕಾಗುತ್ತದೆ. ಅಥವಾ ಸ್ವತಃ ವ್ಯಕ್ತಿಗೆ ತನ್ನ ದೈನಂದಿನ ಚಟುವಟಿಕೆಗಳಲ್ಲಿ ಭವಿಷ್ಯದಲ್ಲಿ ಅನುಭವಕ್ಕೆ ಬರುತ್ತೆವೆ.

ಯಾವುದೇ ಅಡೆತಡೆಯಲ್ಲದೆ ವಿದ್ಯಾಭ್ಯಾಸದಿಂದ ಹಿಡಿದು ಉದ್ಯೋಗ / ವ್ಯವಹಾರ / ವ್ಯಾಪಾರ / ಮದುವೆ / ಹಣಕಾಸು / ಅಂತಸ್ತು ಅಧಿಕಾರ / ಜನಾಕರ್ಷಣೆ / ಹೆಸರು ಹಾಗೆ ಎಲ್ಲ ಹಂತಗಳಲ್ಲಿ ಅತ್ಯುತ್ತಮ ಅಭಿವೃದ್ಧಿಯಾಗುತ್ತಿದ್ದರೆ ನಿಮ್ಮದು ಅತ್ಯುತ್ತಮ ತೇಜಸ್ಸು / ವರ್ಚಸ್ಸು.

ಅದೇ ಹುಟ್ಟಿದಾಗಿನಿಂದ ಕೊನೆಯವರೆಗೂ ಎಲ್ಲ ಹಂತಗಳಲ್ಲಿ ಕಷ್ಟನಷ್ಟ ಉಂಟಾದರೆ ನಿಮ್ಮದು ಹಿಂದಿನ ಜನ್ಮದ ಪ್ರಾರಬ್ಧ ಕರ್ಮ. ಮನುಷ್ಯರಲ್ಲಿನ ಈ ರೀತಿಯ ಎರಡು ಬಗೆಯ ಶಕ್ತಿಯಿಂದ ದೇಹದಲ್ಲಿ ಒಳ್ಳೆಯ ಆಕರ್ಷಣೆಯ ಸುಗಂಧ ವಾಸನೆ ಅಥವಾ ಮುಖ ತಿರುಚುವ ಕೆಟ್ಟ ವಾಸನೆ ಉತ್ಪತ್ತಿಯಾಗುತ್ತಿರುತ್ತದೆ.

 

 

 

ಈ ಒಳ್ಳೆಯ ವಾಸನೆ ಮತ್ತು ಕೆಟ್ಟ ವಾಸನೆ ವ್ಯಕ್ತಿಯಿಂದ ವ್ಯಕ್ತಿಗೆ ಬೇರೆ ಬೇರೆಯಾಗಿರುತ್ತದೆ. 

 

ಯಾವುದೇ ರೀತಿಯ ಎರಡು ಶಕ್ತಿಯಿದ್ದರೂ ಪ್ರಕೃತಿಯಲ್ಲಿ ದೊರಕುವ ಬೇರೆ ಬೇರೆ ಜಾತಿಯ ಹೂವುಗಳಿಂದ ವಿಭಿನ್ನ ವಾಸನೆಯ ಸುಗಂಧ ದೊರೆಯುತ್ತದೆ. ಈ ವಿಭಿನ್ನ ವಾಸನೆಯ ಸುಗಂಧ ದ್ರವ್ಯವನ್ನು ಆಯಾ ವ್ಯಕ್ತಿಗೆ ಹೊಂದುವಂತೆ ಬಳಸಿಕೊಂಡು ತಾತ್ಕಲಿಕವಾಗಿ ತೇಜಸ್ಸು / ವರ್ಚಸ್ಸು ಪಡೆದು ಅದೃಷ್ಟವನ್ನು ಅನುಭವಿಸಬಹುದು.

 

ಯಾರಿಗೆ ಯಾವ ಸುಗಂಧದ್ರವ್ಯ ಹೊಂದುತ್ತದೆ ಎಂಬುದನ್ನು ಜನ್ಮ ದಿನಾಂಕ ಮತ್ತು ಭವಿಷ್ಯ ಸಂಖ್ಯೆ ನೋಡಿ ಕೆಲವೊಂದು ಅತ್ಯುತ್ತಮ ಸುವಾಸನೆಯ ಸುಗಂಧ ದ್ರವ್ಯಗಳು 24 ಗಂಟೆಯೂ ಇದ್ದು ವ್ಯಕ್ತಿಗೆ ಮಾನಸಿಕ ಮತ್ತು ದೈಹಿಕ ಚಟುವಟಿಕೆಗಳಲ್ಲಿ ಉಲ್ಲಾಸ ಉತ್ಸಾಹವನ್ನು ತುಂಬುವುದರ ಜೊತೆಗೆ ದೈನಂದಿನ ಕಾರ್ಯ ಚಟುವಟಿಕೆಗಳಲ್ಲಿ ಅದೃಷ್ಟವನ್ನು ತರುತ್ತವೆ. ಸಾರ್ವಜನಿಕ ಸಂಪರ್ಕ ವೈಯಕ್ತಿಕ ಕಾರ್ಯಗಳು ಸುಗಮವಾಗಿ ನಡೆಯುತ್ತದೆ. ಬಂಧು-ಬಳಗ ಸಹದ್ಯೋಗಿ ಅಪರಿಚಿತ ಸಂಪರ್ಕದಲ್ಲಿ ನೀವು ಬಳಸುವ ಸುಗಂಧ ದ್ರವ್ಯದಿಂದ ತಟ್ಟನೆ ಗುತರ್ಿಸಲ್ಪಡುವವರಾಗುತ್ತೀರಿ. ಇದಕ್ಕಿಂತ ಇನ್ನೇನುಬೇಕು.........

Menu

Go to top