ನೋಡಿ ಆತ್ಮೀಯರೆ, ಇದು ಬಹಳ ಮುಖ್ಯವಾದ ವಿಚಾರ ಜೀವನದಲ್ಲಿ ಯಾವುದೇ ಕೆಲಸ ಮಾಡಬೇಕೆಂದರೂ ನಿಮ್ಮ ಜಾತಕಕ್ಕೆ ಹೊಂದಾಣಿಕೆಯಾಗುವಂತೆ ನಿದರ್ಿಷ್ಟ ದಿನಾಂಕ / ತಿಂಗಳು / ನಕ್ಷತ್ರ / ತಿಥಿ ಬಹಳ ಮುಖ್ಯವಾದದ್ದು. ಹೊಂದಾಣಿಕೆಯಾಗದ / ನಷ್ಟ ಉಂಟು ಮಾಡುವ ದಿನಾಂಕಗಳನ್ನು ಅನುಸರಿಸಿ ಇಂದು ಬಹಳಷ್ಟು ಜನ ಸಮಸ್ಯೆಗಳಿಗೆ ಸಿಲುಕುತ್ತಿದ್ದಾರೆ. ನೀವು ಯಾವುದೇ ಶುಭ ಕಾರ್ಯವನ್ನು ಪ್ರಾರಂಭ ಮಾಡುವುದಕ್ಕೆ ಮೊದಲು ನೀವು ಅಂದುಕೊಂಡಿರುವ ವಿಷಯಕ್ಕೆ ಯಾವ ಸಂಖ್ಯೆಯಿಮದ ಹೊಂದುತ್ತದೆ ಅಥವಾ ಅನುಕೂಲವಾಗುತ್ತದೆ ಎಂಬುದನ್ನು ನಿರ್ಧರಿಸಿಕೊಳ್ಳಬೇಕು. ನಂತರ ಗುರುತುಹಾಕಿರುವ ದಿನಾಂಕಗಳ ದಿನದ ಜೊತೆಗೆ ಶುಭ ದಿನ / ಶುಭ ನಕ್ಷತ್ರ / ಶುಭ ತಿಥಿ ಇದನ್ನು ಕೂಡ ನಿರ್ಧರಿಸಿಕೊಂಡು ನಿಮ್ಮ ಯಾವುದೇ ಕಾರ್ಯವಾದ ನಾಮಕರಣ ಮಾಡುವ ದಿನ / ಮೊದಲು ಶಾಲೆಗೆ ಹೋಗುವ ದಿನ / ವಾಹನ ತೆಗೆದುಕೊಳ್ಳುವ ಚಕ್    ಕೊಡುವ / ಹೊಸ ನಿವೇಶನ ಮನೆ ಕಟ್ಟುವ ದಿನ / ಮುಖ್ಯ ಕೆಲಸ ಕಾರ್ಯಗಳನ್ನು ಮಾಡುವ ದಿನವನ್ನು ಹೊಂದಾಣಿಕೆ ಮಾಡಿಕೊಂಡು ಪ್ರಾರಂಭಿಸಿದಾಗ ಅದೃಷ್ಟ ತನ್ನಿಂತನೇ ಪ್ರಾರಂಭವಾಗುತ್ತದೆ. ಹಾಗೆಯೇ ದಿನಾಂಕ / ತಿಂಗಳು / ವರ್ಷ ಈ ಮೂರನ್ನು ಕೂಡಿದಾಗ 1-8/2-9/3-9/4-8/7-4/7-8/7-9/1-4/1-6/1-9 ಬರಬಾರದು.

ಹಾಗೆಯೇ ಶುಭಕಾರ್ಯಗಳಿಗೆ ಉಪಯೋಗಿಸುವ ದಿನಾಂಕಗಳಲ್ಲಿ ಜನ್ಮ ಸಂಖ್ಯೆ-ಭವಿಷ್ಯ ಸಂಖ್ಯೆಯಲ್ಲಿ ವಿರುದ್ಧ ಸಂಖ್ಯೆಗಳು.

ಮೇಲೆ ಹೇಳಿದ ಹಾಗೆ ನಿಮಗೆ ಅದೃಷ್ಟ ತರುವ ದಿನಗಳು ಎಲ್ಲ ಶುಭಕಾರ್ಯಗಳಿಗೆ ಬಹಳ ಮುಖ್ಯ ಇದನ್ನು ಕೂಡ ಅನುಸರಿಸಬೇಕು. ಗೊತ್ತಿದ್ದು ಅಥವಾ ಗೊತ್ತಿಲ್ಲದೆ, ಅನುಸರಿಸುವ ದುರಾದೃಷ್ಟ ದಿನಗಳು ದುರದೃಷ್ಟವನ್ನು ತರುತ್ತದೆ.

Menu

Go to top