ಹೆಸರು ಬದಲಾವಣೆಯಾದ ನಂತರ ಪ್ರಖ್ಯಾತಿ ಪಡೆದವರು

ಸಾಮಾನ್ಯವಾಗಿ ಹೆಸರಿನಲ್ಲಿ 2 ವಿಧಗಳಿವೆ. 1. ಧನಾತ್ಮಕ ಶಕ್ತಿಯುತ ಹೆಸರು (ಕಠಣತಜ)  2.ಋಣಾತ್ಮಕ ಶಕ್ತಿಯುತ ಹೆಸರು (ಓಚಿರಚಿಣತಜ) ಸಂಖ್ಯಾ ಶಾಸ್ತ್ರದ ಪ್ರಕಾರ ವ್ಯಕ್ತಿಯ ಅದೃಷ್ಟ ಖುಲಾಯಿಸುವುದು ನಿಮ್ಮ ಜನ್ಮಸಂಖ್ಯೆ ಹಾಗೂ ಭವಿಷ್ಯ ಸಂಖ್ಯೆ (ಭಾಗ್ಯ ಸಂಖ್ಯೆ) ಮತ್ತು ಜಾತಕದಲ್ಲಿ ಅದೃಷ್ಟ ತರುವ ಗ್ರಹದ ಸಂಖ್ಯೆಗೆ ನಿಮ್ಮ ಹೆಸರು ಹೊಂದಾಣಿಕೆಯಾದಾಗ ಮಾತ್ರ. ಈ ರೀತಿಯ ಧನಾತ್ಮಕ ಹೆಸರು ಅದೃಷ್ಟವಂತರಾದರೇ ಜೀವನ ಪೂತರ್ಿ ರಕ್ಷಣೆಯನ್ನು ನೀಡುತ್ತದೆ.

ನವಗ್ರಹಗಳ ಆಧಾರದಲ್ಲೇ ಹೆಸರನ್ನು ಇಟ್ಟುಕೊಳ್ಳಬೇಕು. ನಕ್ಷತ್ರಗಳ ಪ್ರಕಾರ ಹೆಸರನ್ನು ಇಟ್ಟುಕೊಳ್ಳಬಾರದು. ನಕ್ಷತ್ರಗಳು ಬರೀ ಮೊದಲಿನ ಅಕ್ಷರವನ್ನು ಸೂಚಿಸುವುದರಿಂದ ನಿಮ್ಮ ಅದೃಷ್ಟ ಸಂಖ್ಯೆಗೆ ಹೊಂದಾಣಿಕೆಯಾಗುವ ಹೆಸರುಗಳು ಸಿಗುವುದಿಲ್ಲ. ಪ್ರತಿ ಮನುಷ್ಯನ ಜೀವನ ವ್ಯಕ್ತಿತ್ವದ ಮೇಲೆ ನವಗ್ರಹಗಳ ಪರಿಣಾಮವೇ ಅತಿ ಮುಖ್ಯ ಎನ್ನುವುದನ್ನು ಈ ಹಿಂದೆಯೇ ತಿಳಿಸಿದ್ದೇನೆ. 

ನವಗ್ರಹಗಳಲ್ಲಿ ಮಿತ್ರತ್ವ ಹಾಗೂ ಶತ್ರುತ್ವ ಈ ಎರಡು ಗುಣ ಪ್ರಭಾವವಿದೆ. ಹಾಗೆ ಈ ನವಗ್ರಹಗಳಿಗೂ ನಾವು ಬಳಸುವ ಅಂತರಾಷ್ಟ್ರೀಯ ಭಾಷೆ ಇಂಗ್ಲೀಷ್ನ 26 ಅಕ್ಷರಗಳಿಗೂ ಬಹಳವಾದ ಹೊಂದಾಣಿಕೆಯಿದೆ. ಈ ರಹಸ್ಯವನ್ನು ಈ ಹಿಂದೆಯೂ ಬಹಳಷ್ಟು ಖ್ಯಾತ ವಿದ್ವಾಂಸರು ಕಂಡು ಹಿಡಿದಿದ್ದಾರೆ. ಇವರ ನಿಯಮದ ಪ್ರಕಾರ ನಡೆಯುವ ಘಟನೆಗಳಿಗೂ / ದಿನಾಂಕಗಳಿಗೂ ಹೆಸರಿನ ಸಂಖ್ಯೆಗಳಿಗೂ ತಾಳೆ ಹಾಕಿ ನೋಡಿದಾಗ ಬಹಳಷ್ಟು ಸತ್ಯಗಳು ಗೋಚರಿಸುತ್ತವೆ.

ನಿಮ್ಮ ಹೆಸರನ್ನು ಇಂಗ್ಲೀಷ್ನಲ್ಲಿ ಬಳಸುವಾಗ ಅದೃಷ್ಟ / ದುರಾದೃಷ್ಟವನ್ನು ತರುವುದು ಈ ನವಗ್ರಹಗಳೇ. ಹುಟ್ಟಿದಸಮಯ / ದಿನಾಂಕ / ತಿಂಗಳು / ವರ್ಷ ಅದೃಷ್ಟ ತರುವಂಥದಾಗಿದ್ದರೇ ನಿಮಗೆ ಗೊತ್ತಿಲ್ಲದಂತೆ ಶಕ್ತಿಯುತವಾದ ಹೆಸರು ತನಗೆ ಬಂದಿರುತ್ತದೆ. ಹಾಗೆಯೆ ಉನ್ನತ ವಿದ್ಯಾಭ್ಯಾಸ ಉನ್ನತ ಅಧಿಕಾರ / ವ್ಯಾಪಾರ / ಪತಿ ಅಥವಾ ಪತ್ನಿ / ವಾಹನ / ಮನೆ ಎಲ್ಲವೂ ಅದೃಷ್ಟ ಸಂಖ್ಯೆಯಲ್ಲಿ ಒಲಿದು ಬಂದಿರುತ್ತದೆ. ಅದೆ. ದುರಾದೃಷ್ಟ ದಿನಾಂಕ / ತಿಂಗಳು / ವರ್ಷವಾಗಿದ್ದರೆ ನಿಮಗೆ ಗೊತ್ತೆ ಆಗದಂತೆ ಹೆಸರಿನ ಜೊತೆಗೆ ಮೇಲೆ ಹೇಳಿದ ಎಲ್ಲ ವಿಷಯಗಳು ದುರಾದೃಷ್ಟವಾಗಿರುತ್ತದೆ.

ಇಲ್ಲಿಂದ ಪ್ರಾರಂಭ ಹಂತ ಹಂತಗಳಲ್ಲಿ ಸಮಸ್ಯೆಗಳು ಆದ್ದರಿಂದ ಮೊದಲಿನ ಹಂತದಲ್ಲೇ ನಿಮ್ಮ ಹೆಸರಿನಲ್ಲಿ ಶಕ್ತಿ ಇದೆಯೆ ಇಲ್ಲವೇ ತಿಳಿದುಕೊಂಡು ಸರಿಯಿಲ್ಲದಿದ್ದರೆ ಬದಲಾಯಿಸಿಕೊಳ್ಳಿ.

Menu

Go to top